ದಾವೋಸ್, ಜ 24:ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಂಗೇರಿ- ಅಮೆರಿಕನ್ ಬಿಲಿಯನೇರ್ ಹಾಗೂ ಲೋಕೋಪಕಾರಿ ಜಾರ್ಜ್ ಸೊರೊಸ್, ದಾವೋಸ್ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾಸತ್ತಾತ್ಮಕವಾಗಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಮ್ ಪ್ರಾಬಲ್ಯದ ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಸೊರೊಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿದರು.
ಜಗತ್ತು ತನ್ನ ಸುತ್ತಲೇ ತಿರುಗಬೇಕೆಂದು ಟ್ರಂಪ್ ಬಯಸುತ್ತಾರೆ. ಅಮೆರಿಕಾ ಅಧ್ಯಕ್ಷರಾಗಬೇಕೆಂಬ ಅವರ ಬಯಕೆ ಈಡೇರುತ್ತಿದ್ದಂತೆಯೇ ಅಧ್ಯಕ್ಷರಿಗೆ ಸೀಮಿತಗೊಂಡಿದ್ದ ಸಾಂವಿಧಾನಿಕ ಮಿತಿಗಳನ್ನು ಅವರು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ.
ಟ್ರಂಪ್ ತಮ್ಮ ವರ್ತನೆಗಳಿಂದಾಗಿ ಅಮೆರಿಕಾ ಸಂಸತ್ತಿನಲ್ಲಿ ವಾಗ್ದಂಡನೆ ಎದುರಿಸುತ್ತಿದ್ದಾರೆ ಎಂದು ಸೊರೊಸ್ ಹೇಳಿದ್ದಾರೆ.
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು, ದೇಶದ ಹಿತಾಸಕ್ತಿಗಳನ್ನು ಕಡೆಗಣಿಸಿ, ಮತ್ತೆ ಚುನಾಯಿತರಾಗಲು ಟಂಪ್ ಏನು ..? ಮಾಡಲು ಹೇಸುವುದಿಲ್ಲ ಎಂದು ಟ್ರಂಪ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.