janadhvani

Kannada Online News Paper

ವರುಣ್ ಹಲ್ಲೆ ಪ್ರಕರಣಕ್ಕೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ- ಎಸ್‌ಡಿಪಿಐ

ಬೆಂಗಳೂರು: ಇಂಡಿಯಾ ಫಾರ್‌ ಸಿಎಎ ಕಾರ್ಯಕರ್ತ ವರುಣ್ ಹಲ್ಲೆ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಎಸ್‌ಡಿಪಿಐ ಪಕ್ಷ ಪತ್ರಿಕಾ ಹೇಳಿಕೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಆರು ಮಂದಿ ಆರೋಪಿಗಳು ಪಕ್ಷದ ಕಾರ್ಯಕರ್ತರಲ್ಲ ಎಂದು ಎಂದಿದೆ.

ಎಸ್‌ಡಿಪಿಐ ರಾಜ್ಯ ಸಮಿತಿ ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿದ್ದು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯನ್ನು ದಾರಿ ತಪ್ಪಿಸುವ ಉದ್ಧೇಶದಿಂದ ಎಸ್‌ಡಿಪಿಐ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.

ವರುಣ್ ಮೇಲೆ ನಡೆದ ಹಲ್ಲೆ ಘಟನೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ನಮಗೆ ಹಿಂಸೆಯ ಮೇಲೆ ನಂಬಿಕೆ ಇಲ್ಲ ಎಂದಿರುವ ಎಸ್‌ಡಿಪಿಐ ಪ್ರಕರಣವನ್ನು ಕೂಲಂಕುಶವಾಗಿ ತನಿಖೆ ನಡೆಸಿ ನೈಜ್ಯ ಆರೋಪಿಗಳನ್ನು ಪತ್ತೆಮಾಡಲಿ ಎಂದು ಒತ್ತಾಯಿಸಿದೆ