janadhvani

Kannada Online News Paper

ಅಸಂವಿಧಾನಿಕ NRC,CAA,NPR ವಿರುದ್ಧ ಪೆರುವಾಯಿ ಮದ್ರಸ ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿಟ್ಲ: ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಸಂವಿಧಾನಿಕ ಕಾಯ್ದೆಗಳಾದ NRC,CAA,NPR ವಿರುದ್ಧ, ಮದ್ರಸ ಅಧ್ಯಾಪಕರ ಒಕ್ಕೂಟ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ (ಈಸ್ಟ್) ಜಿಲ್ಲೆಯ ನಿರ್ದೇಶನದಂತೆ, ಇಲ್ಲಿಗೆ ಸಮೀಪದ ಪೆರುವಾಯಿ ಸಿರಾಜುಲ್ ಹುದಾ ಸೆಕೆಂಡರಿ ಮದ್ರಸ, ಮುಚ್ಚಿರಪದವು ಹಯಾತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಮತ್ತು ಮದ್ರಸತುನ್ನೂರು ಓಣಿಬಾಗಿಲು ಇಲ್ಲಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ ಕಾರ್ಯಕ್ರಮವು ಪೆರುವಾಯಿ ಮದ್ರಸ ಅಂಗಳದಲ್ಲಿ ನಡೆಯಿತು.

ಮಹ್’ಳರತುಲ್ ಬದ್ರಿಯ್ಯ ಮಜ್ಲಿಸ್ ಬಳಿಕ ರಾಷ್ಟ್ರಗೀತೆ ಹಾಡುವ ಮೂಲಕ ಆರಂಭಗೊಂಡ ಕಾರ್ಯಕ್ರಮದಲ್ಲಿ, ಖಂಡನಾ ಭಾಷಣ, ಪ್ರತಿಜ್ಞೆ ಬೋಧನೆ, ಭಿತ್ತಿಪತ್ರ ಪ್ರದರ್ಶನ, ಚಿಲ್ಡ್ರನ್ಸ್ ಚೈನ್ ಮೂಲಕ ಐಕ್ಯತೆ ಘೋಷಣೆ, ಭಾರತದ ಭೂಪಟ ರೂಪದಲ್ಲಿ ವಿದ್ಯಾರ್ಥಿ ದೇಶ ಪ್ರೇಮ ಅನಾವರಣ, ಹಾಗೂ ಸಂವಿಧಾನ ಮತ್ತು ಪೌರತ್ವ ವಿಷಯದಲ್ಲಿ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಇಲ್ಲಿನ ಖತೀಬ್ ಉಸ್ತಾದ್ ಮುಹಮ್ಮದ್ ಶರೀಫ್ ಮದನಿ, ಮುಖ್ಯ ಅಧ್ಯಾಪಕರಾದ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ, ಅಧ್ಯಾಪಕರಾದ ಮುಹಮ್ಮದ್ ಹಾರಿಸ್ ಹಿಮಮಿ, ಶರೀಫ್, ಜಮಾಅತ್ ಸಮಿತಿ ಉಪಾಧ್ಯಕ್ಷರಾದ ಅಬೂಬಕ್ಕರ್ ಸುನ್ನೀ ಫೈಝಿ, ಇಸ್ಮಾಯಿಲ್ ಕಾನ, ಅಬ್ದುಲ್ಲಾ ಕಾನ, ಮುಚ್ಚಿರದವು ಮದ್ರಸ ಸಮಿತಿ ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಸ್ಮಾಯಿಲ್ ಶಾಫಿ, ಮುಹಮ್ಮದ್ ಶರೀಫ್ ಹಾಜಿ, ಅಬ್ಬಾಸ್ ಹಾಜಿ ಸಹಿತ ಊರಿನ ಪ್ರಮುಖ ನೇತಾರರು ಹಾಗೂ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !! Not allowed copy content from janadhvani.com