ಕುವೈತ್ ಸಿಟಿ: ಕುವೈತ್‌ನಲ್ಲಿ ಗೃಹ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕಾನೂನುಗಳನ್ನು ಸುಧಾರಿಸಲಾಗುವುದು ಎಂದು ಮಾನವಶಕ್ತಿ ಪ್ರಾಧಿಕಾರ ಹೇಳಿದೆ. ಗೃಹ ಕಾರ್ಮಿಕರನ್ನು ಪೂರೈಸುವ ಏಜೆನ್ಸಿಗಳಿಗೆ ನಿಬಂಧನೆಗಳು ಹಾಗೂ ಹೆಚ್ಚುವರಿ ನಿಯಮಗಳೊಂದಿಗೆ ಸುಧಾರಣೆಗಳನ್ನು ಜಾರಿಗೆ ತರಲಾಗುವುದು ಎಂದು ಪ್ರಾಧಿಕಾರವು ಸುಳಿವು ನೀಡಿದೆ.
ಕುವೈತ್‌ನಲ್ಲಿ ಫಿಲಿಪೈನಿ ಪ್ರಜೆ ಕೊಲ್ಲಲ್ಪಟ್ಟ ಹಿನ್ನೆಲೆಯಲ್ಲಿ ಕಾನೂನು ಸುಧಾರಣೆಯ ಬಗ್ಗೆ ಮಾನವಶಕ್ತಿ ಪ್ರಾಧಿಕಾರ ಸುಳಿವು ನೀಡಿದೆ. ಗೃಹ ಕಾರ್ಮಿಕರನ್ನು ತಲುಪಿಸುವ ಏಜೆನ್ಸಿಗಳಿಗೆ ಹೆಚ್ಚಿನ ನಿಬಂಧನೆಗಳು ಮತ್ತು ನಿಯಮಗಳನ್ನು ಹೇರಲಾಗುತ್ತವೆ. ಕಾನೂನು ಉಲ್ಲಂಘಿಸುವ ಪ್ರಾಯೋಜಕರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಗೃಹ ಕಾರ್ಮಿಕರ ಹಕ್ಕುಗಳು, ವೇತನ ಪಾವತಿಸದಿರುವುದು ಮತ್ತು ಚಿತ್ರಹಿಂಸೆಗಳಿಗೆ ಸಂಬಂಧಿಸಿದ ದೂರುಗಳ ಇತ್ಯರ್ಥಕ್ಕೆ ಇದು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಓರ್ವ ಪ್ರಾಯೋಜಕನ ವಿರುದ್ಧ ಅನೇಕ ದೂರುಗಳು ದಾಖಲಾಗುತ್ತಿರುವ ಸನ್ನಿವೇಶವಿದೆ.
ಉದ್ಯೋಗಿಗಳಿಂದ ಒಂದಕ್ಕಿಂತ ಹೆಚ್ಚಿನ ದೂರುಗಳನ್ನು ಸ್ವೀಕರಿಸುವ ಪ್ರಾಯೋಜಕರು ಮತ್ತು ನೇಮಕಾತಿ ಕಚೇರಿಗಳನ್ನು ಕಪ್ಪುಪಟ್ಟಿಯಲ್ಲಿ ಸೇರಿಸಲಾಗುವುದು. 2016 ರ ಜುಲೈನಲ್ಲಿ ಕುವೈತ್‌ನಲ್ಲಿ ಜಾರಿಗೆ ಬಂದ ಹೊಸ ದೇಶೀಯ ಕಾರ್ಮಿಕ ಕಾನೂನು ಕಾರ್ಮಿಕರ ಪರವಾಗಿದೆ. ಆದಾಗ್ಯೂ ಶೋಷಣೆಯ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಬಂಧನೆಗಳೊಂದಿಗೆ ಕಾನೂನನ್ನು ಸುಧಾರಿಸಲು ಅಧಿಕಾರಿಗಳು ಈಗ ಯೋಜಿಸುತ್ತಿದ್ದಾರೆ.