ಮಸ್ಕತ್: ಒಮಾನ್‌ನಲ್ಲಿ ಸುಧೀರ್ಘ ಐದು ದಶಕಗಳ ಕಾಲ ಆಡಳಿತ ನಡೆಸಿದ್ದ ದೊರೆ ಖಾಬೂಸ್ ಬಿನ್ ಸಯೀದ್‌ರ ವಿಯೋಗದೊಂದಿಗೆ ಅವರ ಸೋದರ ಸಂಬಂಧಿ ಹೈತಮ್ ಬಿನ್ ತಾರೀಖ್ ಬಿನ್ ತೈಮೂರ್ ಆಲ್-ಸಯೀದ್‌ರನ್ನು ಉತ್ತರಾಧಿಕಾರಿಯನ್ನಾಗಿ ಶನಿವಾರ ನೇಮಿಸಲಾಗಿದೆ.
ತಾರೀಖ್ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಒಮಾನ್‌ನ ಅಭಿವೃದ್ಧಿಗಾಗಿ 2013ರಲ್ಲಿ ರಚಿಸಲಾದ ಸಮಿತಿಯೊಂದಕ್ಕೆ ಅವರನ್ನು ದೊರೆ ಮುಖ್ಯಸ್ಥರನ್ನಾಗಿ ನೇಮಿಸಿದ್ದರು.