janadhvani

Kannada Online News Paper

ಝುಹ್ರಿ ವಿರುದ್ಧ ಕೇಸು: ಸೆಂಟ್ರಲ್ ಕಮಿಟಿ ನಡೆಯಲ್ಲಿ ಅಸಾಮಾಧಾನ- ಅಡ್ಯಾರ್ ಕಾರ್ಯಕ್ರಮ ಬಹಿಷ್ಕರಿಸಲು ಚಿಂತನೆ

ಮಂಗಳೂರು: ಪೌರತ್ವಕ್ಕೆ ಸಂಬಂಧಿಸಿದಂತೆ ಸಮುದಾಯವು ತೀವ್ರ ಆತಂಕಕ್ಕೊಳಗಾಗಿ ಎಲ್ಲ ಭಿನ್ನಮತಗಳನ್ನು ಬದಿಗಿಟ್ಟು ಒಗ್ಗಟ್ಟಿನ ಹೋರಾಟಕ್ಕೆ ಅಣಿಯಾಗುತ್ತಿರುವ ಹೊತ್ತಿನಲ್ಲಿ, ಇದಕ್ಕೆ ನಾಯಕತ್ವ ಕೊಡಬೇಕಾದ ಮಂಗಳೂರಿನ ಖಾಝಿ ಅವರು ತಮ್ಮ ವಿರುದ್ಧ ವಾಟ್ಸಪ್ ಸಂದೇಶವೊಂದನ್ನು ಹಂಚಿದ ಆರೋಪದಲ್ಲಿ ತಮ್ಮದೇ ಸಮುದಾಯದ ಬಡ ಮುಸ್ಲಿಯಾರ್ ಒಬ್ಬರ ಮೇಲೆ ಉನ್ನತ ಪ್ರಭಾವಗಳನ್ನು ಬಳಸಿ ದೇಶದ್ರೋಹದಂತಹ ( IPC ಸೆಕ್ಸನ್ 153 A 114 ,124/A 505 (1) (C ) )ಗಂಭೀರ ಪ್ರಕರಣ ದಾಖಲಾಗುವಂತೆ ಮಾಡಿರುವುದು ಅತ್ಯಂತ ದುಃಖ ಮತ್ತು ನಾಚಿಕೆಗೇಡಿನ ಸಂಗತಿ.

ಜ.15: ಅಡ್ಯಾರಿನಲ್ಲಿ ಬೃಹತ್ ಪ್ರತಿಭಟನೆ- ಸುನ್ನೀ ಕೋರ್ಡಿನೇಷನ್ ಸಮಿತಿ ಯಶಸ್ವಿಗೆ ಕರೆ

ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರುದ್ಧ ಸಂದೇಶಗಳು ಹರಡುತ್ತಿರುವುದು ಸಾಮಾನ್ಯವಾಗಿದ್ದು, ನಾಯಕತ್ವ ಸ್ಥಾನದಲ್ಲಿರುವವರು ಟೀಕೆಗಳ ಬಗ್ಗೆ ಸಹಿಷ್ಣುಗಳಾಗಿರಬೇಕಾದದ್ದು ಸಾಮಾನ್ಯ ಘನತೆ. ಅದರಲ್ಲೂ ಸಾಮಾನ್ಯ ಮದರಸಾ ಶಿಕ್ಷಕರೊಬ್ಬರು

ಸುನ್ನಿಗಳ ನಡುವಿನ ಎರಡು ಬಣಗಳ ನಾಯಕರು ಜೊತೆಗೂಡಿ ಸಂಧಾನ ಕಾರ್ಯಕ್ಕಾಗಿ ರಚಿಸಿದ ಗ್ರೂಪ್ ಯಾರದೋ ಸಂದೇಶವನ್ನು ಶೇರ್ ಮಾಡಿದ್ದು, ಇಂತಹ ಮೆಸೇಜ್ ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸೂಚಿಸುವುದಷ್ಟೇ ಅವರ ಉದ್ದೇಶವಾಗಿತ್ತು.ಆದಾಗ್ಯೂ ಅದನ್ನು ಹಿಡಿದು ರಾಜಕೀಯ ಪ್ರಭಾವ ಬಳಸಿ ಗಂಭೀರ ಪ್ರಕರಣ ದಾಖಲಾಗುವಂತೆ ಮಾಡಿರುವುದರ ಹಿಂದೆ ಖಾಝಿ ಹಾಗೂ ಅವರ ಆಪ್ತರು ಇರುವುದು ತಿಳಿದುಬಂದಿದೆ.

ಎನ್ನಾರ್ಸಿ ವಿರುದ್ಧ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಾಯಕತ್ವದಡಿ 28 ಸಂಘಟನೆಗಳು ಜಂಟಿಯಾಗಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಖಾಝಿ ಹಾಗೂ ಅವರಿಗೆ ಆಪ್ತರಾಗಿರುವ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಹನೀಫ್ ಹಾಜಿಯವರ ಗಮನಕ್ಕೆ ಬಾರದೆ ಇಂತಹ ಕೇಸು ದಾಖಲಾಗಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟ. ಆರೋಪಿತ ವ್ಯಕ್ತಿಯಿಂದ ತಪ್ಪಾಗಿದ್ದಲ್ಲಿ ಆ ವ್ಯಕ್ತಿ ಪ್ರತಿನಿಧಿಸುವ ನಮ್ಮ ಸಂಘಟನೆಯ ನಾಯಕರೊಂದಿಗೆ ವಿಚಾರಿಸಬೇಕಿತ್ತು. ಏಕಾಏಕಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಧಾರ್ಮಿಕ ಶಿಕ್ಷಕರೊಬ್ಬರನ್ನು ಜೈಲಿಗೆ ದೂಡಿ, ಬಡ ಕುಟುಂಬವೊಂದನ್ನು ಕಣ್ಣೀರಿನಲ್ಲಿ ಮುಳುಗಿಸಲು ಹೊರಟಿರುವ ವ್ಯಕ್ತಿಗಳ ಜೊತೆಸೇರಿ ಸಮುದಾಯದ ಸಂರಕ್ಷಣೆಗಾಗಿ ಹೋರಾಡುವುದಕ್ಕೆ ಏನು ಅರ್ಥವಿದೆ?

ಸ್ವಸಮುದಾಯದ ವ್ಯಕ್ತಿಗಳನ್ನು ಕಷ್ಟಕ್ಕೆ ಈಡು ಮಾಡಲು ಹೊರಟವರಿಗೆ ಸಮುದಾಯದ ರಕ್ಷಣೆಗಾಗಿ ಹೋರಾಡಲು ಯಾವ ನೈತಿಕತೆ ಇದೆ ? ಆದುದರಿಂದ ಇಂತಹ ವ್ಯಕ್ತಿಗಳು ನೇತೃತ್ವ ಕೊಡುವ ಸೆಂಟ್ರಲ್ ಕಮಿಟಿ ನಾಯಕತ್ವದ ಅಡ್ಯಾರ್ ಕಣ್ಣೂರಿನ ಕಾರ್ಯಕ್ರಮವನ್ನು ನಮ್ಮ ಸಂಘಟನೆ ಹಾಗೂ ಉಡುಪಿ ಮತ್ತು ಉಳ್ಳಾಲ ಖಾಝಿಗಳು ನಾಯಕತ್ವ ಕೊಡುವ ಎಲ್ಲ ಎಂಟು ಸಂಘಟನೆಗಳು ಒಟ್ಟಾಗಿ ಬಹಿಷ್ಕರಿಸಲಿದೆ ಹಾಗೂ ಇದರ ವಿರುದ್ಧ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಕರ್ನಾಟಕ ಸುನ್ನೀ ಕೋರ್ಡಿನೇಷನ್ ಕಮಿಟಿ((SJU SJM KMJ SYS SEDC SSF SMA KCF)ಯು ಪ್ರಧಾನ ಕಾರ್ಯದರ್ಶಿ ಪಿ. ಪಿ. ಅಹ್ಮದ್ ಸಖಾಫಿ ಕಾಶಿಪಟ್ನ, ಮುಸ್ಲಿಂ ಸೆಂಟ್ರಲ್ ಸಮಿತಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಗೆ ರವಾನಿಸಿದ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com