ರಿಯಾದ್: ಸೌದಿ ಅರೇಬಿಯಾದ ಜಿದ್ದಾ ಮತ್ತು ರಿಯಾದ್ ವಿಮಾನ ನಿಲ್ದಾಣಗಳ ವಾಹನಗಳ ನಿಲುಗಡೆ ದರವನ್ನು ಐದು ರಿಯಾಲ್‌ಗೆ ಏರಿಸಲಾಗಿದೆ. ಈ ಹಿಂದೆ ಮೂರು ರಿಯಾಲ್ ನಿಗದಿಪಡಿಸಲಾಗಿತ್ತು. ಜಿದ್ದಾದ ಹಳೆಯ ವಿಮಾನ ನಿಲ್ದಾಣದಲ್ಲಿ ಗಂಟೆಗೆ ಮೂರು ರಿಯಾಲ್ ದರ ವಸೂಲು ಮಾಡಲಾಗುತ್ತಿದೆ. ಆದರೆ ಹೊಸ ನಿಲ್ದಾಣದಲ್ಲಿ ಹತ್ತು ರಿಯಾಲ್ ದರ ವಸೂಲು ಮಾಡುವ ಬಗ್ಗೆ ವ್ಯಾಪಕ ದೂರು ದಾಖಲಾದ ಹಿನ್ನೆಲೆಯಲ್ಲಿ ಹೊಸ ಬದಲಾವಣೆಯನ್ನು ತರಲಾಗಿದೆ.
ಈ ಪ್ರಕಾರ ಹೊಸ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ಮಷೀನ್ ಮೂಲಕ ನಿಲುಗಡೆ ದರ ಪಾವತಿಸುವವರಿಗೆ ಐವತ್ತು ಶೇಕಡಾ ರಿಯಾಯ್ತಿ ಲಭಿಸಲಿದೆ. ಅಥವಾ ಹತ್ತು ರಿಯಾಲ್‌ಗೆ ಬದಲಾಗಿ ಗಂಟೆಗೆ ಐದು ರಿಯಾಲ್ ಪಾವತಿಸಿದರೆ ಸಾಕಾಗುತ್ತದೆ ಎಂದು ಸಿವಿಲ್ ಏವಿಯೇಷನ್ ವಕ್ತಾರ ಇಬ್ರಾಹೀಂ ಅಲ್ ರೂಸ ತಿಳಿಸಿದ್ದಾರೆ.
ರಿಯಾದ್ ಕಿಂಗ್ ಖಾಲಿದ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಜನವರಿ ಒಂದನೇ ತಾರೀಕಿನಿಂದ ಮೂರು ರಿಯಾಲ್ ದರವನ್ನು ಐದಕ್ಕೆ ಏರಿಸಲಾಗಿದೆ. ಆದರೆ ದೀರ್ಘ ಕಾಲದ ನಿಲುಗಡೆ ದರವು ಮೂರು ರಿಯಾಲ್ ಆಗಿ ಮುಂದು ವರಿಯಲಿದೆ.