ಟೆಹರಾನ್: ಇರಾನ್ ಸೇನಾ ಕಮಾಂಡರ್ ಖಾಸಿಮ್ ಸುಲೇಮಾನಿ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮುಗಿಲು ಮಟ್ಟಿದೆ. ಒಂದು ರೀತಿಯಲ್ಲಿ ಯುದ್ಧದ ವಾತಾವರಣ ಮೂಡಿದೆ. ಈಗ ಉಭಯ ದೇಶಗಳ ನಡುವೆ ಸಂಧಾನಕ್ಕೆ ಜಾಗತಿಕ ಸಮುದಾಯ ಪ್ರಯತ್ನಿಸುತ್ತಿದೆ.
ಇರಾನ್-ಅಮೆರಿಕ ಬಿಕ್ಕಟ್ಟು ಮುಂದುವರಿದ ಬೆನ್ನಲ್ಲೇ ಸಂಯಮ ಕಾಪಾಡಿಕೊಳ್ಳುವಂತೆ ಭಾರತ ಮನವಿ ಮಾಡಿತ್ತು. ಇದಕ್ಕೆ ಇರಾನ್ ಪ್ರತಿಕ್ರಿಯೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದೆ.ಈ ನಡುವೆ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಕುರಿತು ಹೊಸದಿಲ್ಲಿರುವ ಇರಾನ್ ರಾಯಭಾರಿ ಅಲಿ ಚೆಗನಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಂತಿ ಪ್ರಿಯ ರಾಷ್ಟ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಶಾಂತಿ ಕಾಪಾಡಲು ಭಾರತದ ಪಾತ್ರ ಪ್ರಮುಖವಾಗಿದೆ. ಇರಾನ್ ದೇಶದ ಅತ್ಯಂತ ಪರಮಾಪ್ತ ದೇಶಗಳಲ್ಲಿ ಭಾರತ ಕೂಡ ಒಂದು ಎಂದರು.
ಒಂದು ವೇಳೆ ಅಮೆರಿಕ-ಇರಾನ್ ನಡುವೆ ಸಂಧಾನ ಏರ್ಪಟ್ಟು ಭಾರತ ಮಧ್ಯಸ್ಥಿಕೆ ವಹಿಸಿದರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಅಲಿ ಚೆಗನಿ ತಿಳಿಸಿದರು.