ಮಂಜನಾಡಿ,ಜ.7: ಅಲ್ ಮದೀನಾ ದಅವಾ ಕಾಲೇಜ್ ವಿದ್ಯಾರ್ಥಿಗಳ ಮೂರು ದಿನದ “ಗುಲ್ಶನ್ ಕಲಾ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು.
ಸರ್ವ ಧರ್ಮ ಗ್ರಂಥಗಳು ಭಾರತೀಯ ಸಂವಿಧಾನದ ಅಡಿಪಾಯವಾಗಿದೆ ಧರ್ಮ ಗ್ರಂಥಗಳ ಅಧ್ಯಯನ ಪ್ರತಿಯೊಬ್ಬ ಭಾರತೀಯರಿಗೂ ಅತ್ಯವಶ್ಯಕವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅಡ್ವೊಕೇಟ್ ಪುನಿತ್ ಅಪ್ಪು ಹೇಳಿದರು.
ಪತ್ರಕರ್ತ ಹಂಝ ಮಲಾರ್‌ರವರು ದಿಕ್ಸೂಚಿ ಮಾತುಗಳನ್ನಾಡಿದರು.
ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.ದಅವಾ ಕಾಲೇಜು ಪ್ರಾಂಶುಪಾಲ ಸಲಾಂ ಅಹ್ಸನಿ ಉದ್ಘಾಟನೆ ಗೈದರು. ಅಬ್ದುಲ್ ರಝಾಕ್ ಸರ್,ಅಬ್ದುಲ್ ಅಝೀಝ್ ಅಹ್ಸನಿ, ಅಬ್ದುರ್ರಹ್ಮಾನ್ ಅಹ್ಸನಿ, ಅಶ್ರಫ್ ಸಖಾಫಿ, ಮುನೀರ್ ಅಹ್ಮದ್ ಸಖಾಫಿ, ಮುಹಮ್ಮದ್ ಕುಂಞಿ ಅಮ್ಜದಿ, ಇರ್ಫಾನ್ ಅಬ್ದುಲ್ಲಾ ನೂರಾನಿ, ಇಕ್ಬಾಲ್ ಮರ್ಝೂಖಿ ಸಖಾಫಿ, ಜುನೈದ್ ಮರ್ಝೂಖಿ, ಕನ್ವೀನರುಗಳಾದ ಅಶ್ರಫ್, ರಫೀಖ್, ಹೈದರ್ ಮತ್ತಿತರು ಉಪಸ್ಥಿತರಿದ್ದರು.
ಬಿಶಾರತುಲ್ ಮದೀನಾ ಅಧ್ಯಕ್ಷ ನಿಝಾರ್ ಸ್ವಾಗತಿಸಿ,ಅಬ್ದುಲ್ ಸಮದ್ ನಿರೂಪಣೆ, ಕಾರ್ಯದರ್ಶಿ ನೌಶಾದ್ ವಂದಿಸಿದರು.