ಟೆಹ್ರಾನ್, ಜ 7- ಅಮೆರಿಕಾ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗಸಂಸ್ಥೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಪರಿಗಣಿಸುವ ತಿದ್ದುಪಡಿ ವಿಧೇಯಕವನ್ನು ಇರಾನ್ ಸಂಸತ್ ಮಂಗಳವಾರ ಬಹುಮತದಿಂದ ಅಂಗೀಕರಿಸಿದೆ. ಜನರಲ್ ಖಾಸಿಂ ಸುಲೈಮಾನಿ ಹತ್ಯೆ ಮಾಡಿದವರನ್ನು “ಭಯೋತ್ಪಾದಕರು” ಎಂದು ಸಂಸತ್ತು ಮಂಗಳವಾರ ಅನುಮೋದಿಸಿದೆ.
ಅಮೆರಿಕಾ ಕೇಂದ್ರೀಯ ಕಮಾಂಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವ ತಿದ್ದುಪಡಿ ವಿಧೇಯಕವನ್ನು ಸಂಸತ್ ಸದಸ್ಯರು ಅನುಮೋದಿಸಿದ್ದಾರೆ. ಭಯೋತ್ಪಾದನೆ ವಿಧೇಯಕದ ವ್ಯಾಪ್ತಿಯನ್ನು ವಿಸ್ತರಿಸಿ ಅಮೆರಿಕಾದ ರಕ್ಷಣಾ ಇಲಾಖೆ ಹಾಗೂ ಅದರ ಎಲ್ಲಾ ಅಂಗ ಸಂಸ್ಥೆಗಳನ್ನು ಇದರ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ – ಇರ್ನಾ ವರದಿ ಮಾಡಿದೆ
ಕುದ್ಸ್ ಪಡೆಯ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿ ಹತ್ಯೆ ನಡೆಸಿದ ಎಲ್ಲಾ ಕಮಾಂಡರ್ ಗಳು ಹಾಗೂ ಅಮೆರಿಕಾ ಸಿಬ್ಬಂದಿಯನ್ನು ಭಯೋತ್ಪಾದಕರು ಎಂದು ಇರಾನ್ ಸಂಸತ್ ಘೋಷಿಸಿದೆ.
ಸಂಸತ್ತಿನ ಸ್ಪೀಕರ್ ಅಲಿಲಾರಿಜಾನಿ, ಕುದ್ಸ್ ಪಡೆಯ ಶಾಖೆಗಾಗಿ ಪ್ರಸಕ್ತ ಇರಾನಿಯನ್ ವರ್ಷದಲ್ಲಿ ರಾಷ್ಟ್ರೀಯ ಅಭಿವೃದ್ದಿ ನಿಧಿಯಿಂದ 200 ಮಿಲಿಯನ್ ಯುರೋ ಗಳನ್ನು ಪಾವತಿಸಲಾಗುವುದು ಎಂದು ಪ್ರಕಟಿಸಿದ್ದಾರೆ.