ಮುಂಬೈ, ಜ.6: ಜಾಮಿಯಾ ವಿವಿ ಕ್ಯಾಂಪ್ ನಲ್ಲಿನ ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಚ್ ಅನ್ನು ಬ್ರಿಟಿಷ್ ಆಡಳಿತದ ಜಲಿಯನ್ ವಾಲಾಬಾಗ್ ಗೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಇದೀಗ ಜೆಎನ್ ಯು ಕಾಲೇಜಿನಲ್ಲಿನ ಹಿಂಸಾಚಾರವನ್ನು 26/11ರ ಮುಂಬೈ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಾರೆ.
ದೇಶದಲ್ಲಿ ವಿದ್ಯಾರ್ಥಿಗಳು ಅಸುರಕ್ಷಿತ ಭಾವನೆ ಹೊಂದಿದ್ದಾರೆ. ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ನನಗೆ ಮುಂಬೈ ಮೇಲೆ 26/11 ಭಯೋತ್ಪಾದಕರ ದಾಳಿಯನ್ನು ನೆನಪಿಸಿತು, ಜೆಎನ್‌ಯು ಕ್ಯಾಂಪಸ್‌ನಲ್ಲಿ ರವಿವಾರ ಸಂಜೆ ನಡೆದ ಹಿಂಸಾಚಾರದ ಕುರಿತು ಮಾತನಾಡಿದ ಠಾಕ್ರೆ ದಾಳಿಕೋರರನ್ನು ‘ಹೇಡಿಗಳು’ ಎಂದು ಕರೆದರು., “ಜೆಎನ್‌ಯುನಲ್ಲಿ ಮುಸುಕುಧಾರಿ ದಾಳಿಕೋರರು ಹೇಡಿಗಳು, ಅವರ ಗುರುತನ್ನು ಬಹಿರಂಗಪಡಿಸಬೇಕು ಎಂದರು.ಮಹಾರಾಷ್ಟ್ರದ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ, (ಅವರನ್ನು) ಅವರನ್ನು ನೋಯಿಸುವ ಯಾವುದೇ ಕ್ರಮವನ್ನು ನಾವು ಸಹಿಸುವುದಿಲ್ಲ. “
ಹಿಂಸಾಚಾರದಲ್ಲಿ ಪಾಲ್ಗೊಳ್ಳುವವರನ್ನು ಮರೆಮಾಚುವ ಅವಶ್ಯಕತೆಯಿತ್ತೆ. ಅವರ ಮುಖಗಳು ಇಡೀ ದೇಶಕ್ಕೆ ತಿಳಿದಿರಬೇಕು. ಸರಿಯಾದ ಸಮಯದಲ್ಲಿ ಅವರು ಬಹಿರಂಗಗೊಳ್ಳುತ್ತಾರೆ ಎಂದು ಠಾಕ್ರೆ ಹೇಳಿದರು.
ಇದೇ ವೇಳೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ದಾಳಿ ಪೂರ್ವನಿಯೋಜಿತವಾಗಿದೆ. ಅದಕ್ಕಾಗಿಯೇ ಅವರು ತಮ್ಮ ಮುಖಗಳನ್ನು ಮುಚ್ಚಿಕೊಂಡು ಬಂದಿದ್ದರು ಎಂದು ಹೇಳಿದ್ದಾರೆ.