ಕಲ್ಲಿಕೋಟೆ: ಪೌರತ್ವ ಕಾಯ್ದೆಗೆ ಸಂಬಂಧಿಸಿದಂತೆ ಗೃಹ ಸಂಪರ್ಕ ಕಾರ್ಯಕ್ರಮಕ್ಕಾಗಿ ಬಿಜೆಪಿ ಹೊರತಂದ ಕರಪತ್ರವನ್ನು ಸ್ವೀಕರೀಸಿದ ನಾಸಿರ್ ಫೈಝಿ ಕೂಡತ್ತಾಯಿ ಅವರನ್ನು ಸಂಘಟನೆಯ ಎಲ್ಲಾ ಪದಾಧಿಕಾರಿ ಸ್ಥಾನಗಳಿಂದ ಅಮಾನತುಗೊಳಿಸಲಾಗಿದೆ ಎಂದು ಇ.ಕೆ.ವಿಭಾಗ ಸಮಸ್ತ ತಿಳಿಸಿದೆ.
ನಾಸರ್ ಫೈಝಿ ಸಮಸ್ತ ವಿರೋಧಿ ಚಟುವಟಿಕೆ ನಡೆಸಿರುವುದಾಗಿ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಇದರ ಅಧೀನ ಸಂಘಟನೆಗಳ ಅಧಿಕೃತ ಪದಾಧಿಕಾರಿ ಸ್ಥಾನಗಳಿಂದ ಅಮಾನತುಗೊಳಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮ್ಮ ಮನೆಯಲ್ಲಿ ಬಿಜೆಪಿ ನಾಯಕರನ್ನು ಬರಮಾಡಿಕೊಂಡು ಪೌರತ್ವ ಕಾನೂನು ಪರವಾದ ಕರಪತ್ರವನ್ನು ಸ್ವೀಕರಿಸಿದ ನಾಸಿರ್ ಫೈಝಿ ಅವರ ಕ್ರಮದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ನಿನ್ನೆಯಿಂದ ವ್ಯಾಪಕ ಟೀಕೆಗಳು ಕೇಳಿಬಂದಿದೆ. ಇದು ಸಮುದಾಯ ಮತ್ತು ಸಂಸ್ಥೆಗೆ ದ್ರೋಹವಾಗಿದೆ ಎಂಬುದು ಮುಖ್ಯ ಟೀಕೆಯಾಗಿದೆ. ಎಸ್‌ವೈಎಸ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಮಲುಲ್ಲೈಲಿ ತಂಙಳ್ ಮತ್ತು ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ಅವರು ಬಹಿರಂಗವಾಗಿ ಟೀಕಿಸಿದ್ದರು.