ಮಂಗಳೂರು: ಇತ್ತೀಚಿಗೆ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಮಾತಾಡುತ್ತಾ ಪ್ರತಿಭಟನೆ ಯಲ್ಲಿ ಭಾಗವಹಿಸಿದ ಎಲ್ಲರನ್ನೂ ಶೂಟ್ ಮಾಡಬೇಕಿತ್ತು ಎಂಬ ಹೇಳಿಕೆ ನೀಡಿರುವ ಸೋಮಶೇಖರ ರೆಡ್ಡಿ ಯನ್ನು ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ ಜೈಲಿಗೆ ಹಾಕಬೇಕು ಎಂದು ಮಾಜಿ ಮೇಯರ್ ಹಾಗೂ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ರವರು ಒತ್ತಾಯಿಸಿದ್ದಾರೆ.
ಮಂಗಳೂರು ಗಲಭೆಗೆ ಪೊಲೀಸರೇ ಕಾರಣ ಎಂಬುದು ಜಗಜ್ಜಾಹೀರುಗೊಂಡ ವಿಚಾರ. ಈ ಗಲಭೆಯಲ್ಲಿ ಅಮಾಯಕರಿಬ್ಬರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು
ಭಾರತದ ಸಂವಿಧಾನದ ಬಗ್ಗೆ ಎಳ್ಳಷ್ಟೂ ತಿಳಿಯದೆ ಮತಿಭ್ರಮಣೆಯಾದವರಂತೆ ಬಾಯಿಗೆ ಬಂದಂತೆ ಮಾತಾಡಿ ಸಮಾಜದಲ್ಲಿ ಅಶಾಂತಿ ಸ್ರಷ್ಟಿಸುವ ಸೋಮಶೇಖರ ರೆಡ್ಡಿಯಂತವರನ್ನು ಶೂಟ್ ಮಾಡುತ್ತಿದ್ದರೆ ಸೌಹಾರ್ದತೆಯ ಸುಂದರ ನಾಡನ್ನು ಕಟ್ಟಬಹುದಿತ್ತು ಎಂದು ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






