janadhvani

Kannada Online News Paper

ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ: CAA ಜಾರಿಯಿಂದ ಭಾರತ ಹಿಂದೆ ಸರಿಯಬೇಕು- ಬಹ್ರೈನ್

ಮನಾಮ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದರಿಂದ ಭಾರತ ಹಿಂದೆ ಸರಿಯುವಂತೆ ಬಹ್ರೈನ್ ಪ್ರತಿನಿಧಿಗಳ ಸಭೆ(ಸಂಸತ್ತು) ಕರೆ ನೀಡಿದೆ.

ಮುಸ್ಲಿಮರನ್ನು ಹೊರತುಪಡಿಸಿ ಇತರ ನಿರಾಶ್ರಿತರಿಗೆ ಪೌರತ್ವ ನೀಡುವ ನಿರ್ಧಾರವು ತಾರತಮ್ಯವಾಗಿದೆ ಎಂದು ಪ್ರತಿನಿಧಿ ಸಭೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಾರತದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೊಲ್ಲಿ ರಾಷ್ಟ್ರವೊಂದು ಅಧಿಕೃತವಾಗಿ ವಿರೋಧಿಸುತ್ತಿರುವುದು ಇದೇ ಮೊದಲು.

ಬಹ್ರೈನ್ ಪ್ರತಿನಿಧಿಗಳ ಸಭೆಯು ಭಾರತದ ಸಂಸತ್ತಿಗೆ ಸಮಾನವಾಗಿದೆ. ಭಾರತದ ಪೌರತ್ವ ತಿದ್ದುಪಡಿ ಕಾನೂನು ತಾರತಮ್ಯದಿಂದ ಕೂಡಿದೆ ಮತ್ತು ಅದನ್ನು ರದ್ದುಪಡಿಸಬೇಕು ಎದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ತಿದ್ದುಪಡಿಯು ಪೌರರ ಪೈಕಿ ಒಂದು ವಿಭಾಗವು ತಮ್ಮ ಪೌರತ್ವವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆಯೇ ಎಂಬ ಅನುಮಾನವಿದೆ. ನಾಗರಿಕರಲ್ಲಿನ ತಾರತಮ್ಯವು ಅಂತರ್‌ರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಬಹ್ರೈನ್‌ನ ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತದ ಪ್ರಾಚೀನ ಸಂಪ್ರದಾಯವೆಂದರೆ ಸಹನೆ ಮತ್ತು ಸಹಬಾಳ್ವೆಯಾಗಿದೆ. ಭಾರತದ ಸಂಸ್ಕೃತಿಯು ಎಲ್ಲ ಜನರ ಮುಕ್ತ ಮನಸ್ಸಿನ ವಿಧಾನವಾಗಿದೆ ಎಂದು ಹೇಳಿಕೆಯು ಒತ್ತಿಹೇಳುತ್ತದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಭಾರತದಲ್ಲಿ ಪ್ರಮುಖ ಹೋರಾಟಗಳು ನಡೆಯುತ್ತಿವೆ ಎಂಬುದನ್ನು ಕೌನ್ಸಿಲ್ ಗಮನಿಸಿದೆ. ಭಾರತ ಮತ್ತು ಅರಬ್ ರಾಷ್ಟ್ರಗಳೊಂದಿಗಿನ ಸಂಬಂಧ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಹಕಾರ ಮುಂದುವರಿಯಬೇಕು ಎಂಬುದು ಆಗ್ರಹವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com