janadhvani

Kannada Online News Paper

ಸೌದಿ: 75% ಸ್ವದೇಶೀಕರಣ- ಉದ್ಯೋಗ ನಷ್ಟ ಭೀತಿಯಲ್ಲಿ ಅನಿವಾಸಿಗಳು

ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯದಲ್ಲಿ ಸ್ವದೇಶೀಕರಣ ದರವನ್ನು 75 ಪ್ರತಿಶತಕ್ಕೆ ಹೆಚ್ಚಿಸುವ ಕರಡು ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ.

ಕರಡು ಪ್ರಸ್ತಾವನೆಯನ್ನು ಸೌದಿ ಶೂರಾ ಕೌನ್ಸಿಲ್ ಅನುಮೋದಿಸಿದ್ದು, ಹೊಸ ತಿದ್ದುಪಡಿ ಪ್ರಸ್ತಾವನೆಯು ಸ್ಥಳೀಯ ಜನರಲ್ಲಿ ನಿರುದ್ಯೋಗ ದರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಶೂರಾ ಕೌನ್ಸಿಲ್‌ನ ಅಡಿಯಲ್ಲಿ ಕಾರ್ಯಾಚರಿಸುವ ಸಾಮಾಜಿಕ ವ್ಯವಹಾರ ಮತ್ತು ಕುಟುಂಬ ಯುವ ಸಮಿತಿಯು ಕರಡನ್ನು ಅಂಗೀಕರಿಸಿದೆ. ದೇಶದ ಖಾಸಗಿ ಸಂಸ್ಥೆಗಳ ಹುದ್ದೆಗಳಲ್ಲಿ ಎಪ್ಪತ್ತೈದು ಶೇಕಡಾ ಸ್ಥಳೀಯರಿಗೆ ಮಾತ್ರ ಮೀಸಲಿಡಲಾಗುವುದು. ಕಾರ್ಮಿಕ ಕಾನೂನಿನ 24ನೇ ವಿಧಿ ತಿದ್ದುಪಡಿ ಮಾಡುವ ಮೂಲಕ ಹೊಸ ಪ್ರಸ್ತಾಪವನ್ನು ಸೇರಿಸಲಾಗಿದೆ.

ಸಂಸ್ಥೆಯ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವ ಸ್ಥಳೀಯರ ಪ್ರಮಾಣವು 75% ಕ್ಕಿಂತ ಕಡಿಮೆಯಿರಬಾರದು. ಸಂಸ್ಥೆ ಶಿಫಾರಸು ಮಾಡಿದ ಹುದ್ದೆಗಳಿಗೆ ಅರ್ಹ ಸ್ಥಳೀಯರು ಲಭ್ಯವಿಲ್ಲದಿದ್ದಲ್ಲಿ, ವಿದೇಶಿಯರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಅನುಮತಿಸಲಾಗುತ್ತದೆ. ಹೊಸ ಕಾನೂನು ಸಂಬಂಧಿತ ಇಲಾಖೆಗಳ ಅನುಮೋದನೆಯೊಂದಿಗೆ ಮಾತ್ರ ಎಂದು ಪ್ರಸ್ತಾಪಿಸಿದೆ.

ಹೊಸ ತಿದ್ದುಪಡಿ ರಾಷ್ಟ್ರೀಯ ಪರಿವರ್ತನೆ ಯೋಜನೆಯ ಭಾಗವಾಗಿದ್ದು, ಇದು ನಿರುದ್ಯೋಗ ದರವನ್ನು ಕಡಿಮೆ ಮಾಡಲು ಮತ್ತು ಅನುಕೂಲಕರ ಕೆಲಸದ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. 2030ರ ವೇಳೆಗೆ ನಿರುದ್ಯೋಗ ದರವನ್ನು ಏಳು ಪ್ರತಿಶತಕ್ಕೆ ಇಳಿಸುವ ಯೋಜನೆ ನಡೆಯುತ್ತಿದೆ. ಸ್ಥಳೀಯರಲ್ಲಿ ನಿರುದ್ಯೋಗ ದರವು ಪ್ರಸ್ತುತ ಶೇಕಡಾ 12 ಆಗಿದ್ದು, ಹೊಸ ಪ್ರಸ್ತಾಪವು ದೇಶದ ಯುವಜನರಿಗೆ ಹೆಚ್ಚು ನಾಯಕತ್ವ ವಹಿಸಲು ಮತ್ತು ರಾಷ್ಟ್ರೀಯ ನಾಯಕತ್ವವನ್ನು ಉನ್ನತೀಕರಿಸಲು ಸಹಾಯ ಮಾಡಲಿದೆ ಎಂದು ಲೆಕ್ಕಹಾಕಲಾಗಿದೆ.

error: Content is protected !! Not allowed copy content from janadhvani.com