janadhvani

Kannada Online News Paper

ಮೂಡಡ್ಕ ರಿಯಾದ್ ಸಮಿತಿ ‘ಫ್ಯಾಮಿಲಿ ಮುಲಾಖಾತ್-19’ ಯಶಸ್ವಿ ಸಮಾಪ್ತಿ

ರಿಯಾದ್,ಡಿ.26: ಅಲ್ ಮದೀನತುಲ್ ಮುನವ್ವರ ಮೂಡಡ್ಕ ರಿಯಾದ್ ಸಮಿತಿ ವತಿಯಿಂದ ಫ್ಯಾಮಿಲಿ ಮುಲಾಖಾತ್-19 ರಿಯಾದಿನ ನೂರ್ ಮಾಸ್ ಆಡಿಟೋರಿಯಂ ನಲ್ಲಿ ಡಿಸೆಂಬರ್ 26ರಂದು ಅದ್ದೂರಿಯಾಗಿ ನಡೆಯಿತು.

AMMEC ಪ್ರಾಂಶುಪಾಲರಾದ ಸ್ವಲಾವುದ್ದೀನ್ ಸಖಾಫಿ ದುಆಃ ನೇತೃತ್ವ ವಹಿಸಿ, ಪಿ.ಐ ಇಲ್ಯಾಸ್ ಲತೀಫಿ ಪೆರಿಯಪಾದೆ ಖಿರಾಅತ್ ಪಠಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. AMMEC ಸೌದಿ ಅರೇಬಿಯಾ ಕೇಂದ್ರ ಸಮಿತಿ ಪ್ರ.ಕಾರ್ಯದರ್ಶಿ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ ಸಮಾರಂಭವನ್ನು ಉಧ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸೌದಿ ಕೇಂದ್ರ ಸಮಿತಿ ಅಧ್ಯಕ್ಷರಾದ ಯೂಸುಫ್ ಹಾಜಿ ಕಳಂಜಿಬೈಲ್ ರವರು ವಹಿಸಿದ್ದರು.

ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ್ದ AMMEC ಜನರಲ್ ಮೇನೇಜರ್ ಅಶ್ರಫ್ ಸಖಾಫಿ ಮಾಡಾವು, AMMEC ಪ್ರಾಂಶುಪಾಲರಾದ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ರವರು ಮಾತನಾಡಿ ಬೆಳ್ತಂಗಡಿ ತಾಲೂಕಿನ ಅಲ್ ಮದೀನತುಲ್ ಮುನವ್ವರ ಎಜ್ಯುಕೇಶನ್ ಸೆಂಟರ್ ಮೂಡಡ್ಕ ಕ್ಯಾಂಪಸಿನಲ್ಲಿ ಸುಮಾರು ಒಂದು ಕೋಟಿ ವೆಚ್ಚದ ಪದವಿ ಪೂರ್ವ ಕಟ್ಟಡದ ಕುರಿತು ಸವಿರವಾಗಿ ವಿಸ್ತರಿಸಿದರು. ಈ ಸಂಧರ್ಭದಲ್ಲಿ ಹಲವಾರು ಧಾನಿಗಳು ಕಟ್ಟಡಕ್ಕೆ ಬೇಕಾಗಿ ಸಹಕಾರ ನೀಡಿದರು.

ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಗೋರ್ನಾಥ ಸೆಕ್ಟರಿನ ಉಬೈದ್ ಮುಸ್ಲಿಯಾರ್ ಇಂದ್ರಾಜೆ ಹಾಗೂ ಜಾಬಿರ್ ಕಳಂಜಿಬೈಲ್ ತಂಡದವರಿಂದ ಬಹಳ ವಿಜೃಂಭನೆಯಿಂದ ಬುರ್ದಾ ಮಜ್ಲಿಸ್ ನಡೆಯಿತು. ಇದೇ ಸಂದರ್ಭ ಸಂಸ್ಥೆಯ ಮ್ಯಾನೇಜರ್ ಅಶ್ರಫ್ ಸಖಾಫಿ ಮಾಡಾವು ಹಾಗೂ ಪ್ರಾಂಶುಪಾಲರಾದ ಸ್ವಲಾವುದ್ದೀನ್ ಸಖಾಫಿ ಮಾಡನ್ನೂರು, ಸೌದಿ ಅರೇಬಿಯಾ ಆರ್ಗನೇಝರ್ ಕರೀಂ ಲತೀಫಿ ಯವರಿಗೆ AMMEC ರಿಯಾದ್ ಸಮಿತಿ ವತಿಯಿಂದ ಸನ್ಮಾನಿಸಿ ಕಿರು ಕಾಣಿಕೆ ನೀಡಲಾಯಿತು.

ವೇದಿಕೆಯಲ್ಲಿ ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಫಾರೂಕ್ ಸಅದಿ, ಕಾರ್ಯದರ್ಶಿ ನಿಝಾಂ ಸಾಗರ್, AMMEC ನ್ಯಾಷನಲ್ ಕಮಿಟಿ ಉಪಾಧ್ಯಕ್ಷರಾದ ಉಮ್ಮರ್ ಹಾಜಿ ಅಳಕೆಮಜಲ್,ಅಲ್ ಖಾದಿಸ ಅಧ್ಯಕ್ಷರಾದ ಇಸ್ಮಾಯಿಲ್ ಕಣ್ಣಂಗಾರ್, ಸುನ್ನೀ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬಜಪೆ, ಬತ್ತಾ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಸಾಲೆತ್ತೂರು, ಮಸ್ನಾ ಅಧ್ಯಕ್ಷರಾದ ದಾವೂದ್ ಹಾಜಿ, ಬದಿಯ ಅಧ್ಯಕ್ಷರಾದ ಅಮೀರ್ ಕಲ್ಲಾಪು, ಮುರೂಜ್ ಅಧ್ಯಕ್ಷರಾದ ದಾವೂದ್ ಸಅದಿ ಉರುವಾಲುಪದಲು, ಸೇರಿದಂತೆ ಕೆ.ಸಿ.ಎಫ್, ICF, RSC ನೇತಾರರು, ಮಲ್ಜಹ್, ಅಲ್ ಖಾದಿಸ, ಮನ್ಶರ್,ದಾರುಲ್ ಅಶ್ಅರಿಯ್ಯಾ ಸುರಿಬೈಲ್, ದಾರುಲ್ ಇರ್ಶಾದ್, ಅಲ್ ಮದೀನಾ ಮಂಜನಾಡಿ, ಶಿರಿಯ ಲತೀಫಿಯಾ, ಮಹಿಮ್ಮಾತ್, ಸಅದಿಯಾ ಸ್ಥಾಪನೆಗಳ ನೇತಾರರು ಹಾಗೂ ಇನ್ನಿತರ ಹಲವಾರು ನಾಯಕರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನಾಯಕರಾದ ಬಶೀರ್ ತಲಪಾಡಿ, ನವಾಝ್ ಚಿಕ್ಕಮಂಗಳೂರು, ಅಬ್ದುರ್ರಝ್ಝಾಕ್ ಹಾಜಿ ಮಾಚಾರ್, ಹೈದರ್ ಹಾಜಿ ಸರಳಿಕಟ್ಟೆ, ಕರೀಂ ಹಾಜಿ ಕೂಡ್ಲಿಪೇಟೆ, ದಾವೂದ್ ಹಾಜಿ ಕೂಡ್ಲಿಪೇಟೆ, ಇಬ್ರಾಹಿಂ ಹಾಜಿ ಮಾಣಿ, ಇಬ್ರಾಹಿಂ ಬೇಂಗಿಲ, ಹಮೀದ್ ಕನರಾಜೆ, ಶರೀಫ್ ಗುಂಪಕಲ್ಲು, ಹಬೀಬ್ ಟಿ.ಎಚ್, ರಿಯಾ ನೆಲ್ಯಾಡಿ, ಬಶೀರ್ ಮೂರುಗೋಳಿ, ಇಬ್ರಾಹಿಂ ಮುರ, ರಿಝ್ವಾನ್ ಬೆಳ್ತಂಗಡಿ, ಶರೀಫ್ ಕಣ್ಣಂಗಾರ್, ಅಶ್ರಫ್ ಕೃಷ್ಣಾಪುರ, ಶರೀಫ್ ಕೋಲ್ಪೆ, ಅಬ್ದುರ್ರಹ್ಮಾನ್ ಗಂಟಾಲ್ಕಟ್ಟೆ, ಅಬ್ದುಲ್ ಮಜೀದ್ ಪಡ್ಡಂದಡ್ಕ, ಅಬ್ದುಲ್ ಖಾದರ್ ಸನಯ್ಯಾ, ಹಸನ್ ಸಾಗರ್ ಮೊದಲಾದವರು ಉಪಸ್ಥಿತರಿದ್ದರು.

ಕೆಸಿಎಫ್ ರಿಯಾದ್ ಝೋನ್ ನಾಯಕರಾದ ಅಶ್ರಫ್ ಕಿಲ್ಲೂರು ಕಾರ್ಯಕ್ರಮವನ್ನು ನಿರೂಪಿಸಿದರು. ಸೌದಿ ಅರೇಬಿಯಾ ಆರ್ಗನೈಝರ್ ಕರೀಂ ಲತೀಫಿ ಬೇಂಗಿಲ ಸ್ವಾಗತಿಸಿ, ದಾವೂದ್ ಹಾಜಿ ಕಜೆಮಾರ್ ಧನ್ಯವಾದಗೈದರು.

ವರದಿ: ರಿಯಾ ನೆಲ್ಯಾಡಿ