janadhvani

Kannada Online News Paper

NRC-CAA ವಿರುದ್ಧ ನಾಳೆ (ಡಿ 30) ಕಾಪುವಿನಲ್ಲಿ ನಡೆಯುವ ಪ್ರತಿಭಟನೆ ಯಶಸ್ವಿಗೊಳಿಸಲು ಸುನ್ನೀ ಸಂಘಟನೆಗಳ ಕರೆ

ಉಡುಪಿ: ನೈಜ ಭಾರತೀಯರ ಅಸ್ಥಿತ್ವವನ್ನು ಮತ್ತು ಭಾರತೀಯತೆಯನ್ನು ಪ್ರಶ್ನಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವೆನಿಸುವ ಪೌರತ್ವ ಕಾಯ್ದೆ (CAA ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (NRC) ಯನ್ನು ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ಅಸಾಂವಿಧಾನಿಕ ನಡೆಯನ್ನು ವಿರೋಧಿಸಿ 30/12/2019 ಸೋಮವಾರ ನಾಳೆ ಕಾಪು ಪೇಟೆಯಲ್ಲಿ ಬೆಳಿಗ್ಗೆ 10.00 ಘಂಟೆಗೆ ಜಾತ್ಯತೀತ ನಿಲುವಿನ ರಾಜಕೀಯ ಪಕ್ಷಗಳು ಮತ್ತು ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾಂತಿಯುತ ಪ್ರತಿಭಟನಾ ಸಭೆ ನಡೆಯಲಿದ್ದು.

ಪ್ರಜ್ಞಾವಂತ ನಾಗರಿಕ ಬಾಂಧವರೆಲ್ಲರೂ ಈ ಪ್ರತಿಭಟನೆಯಲ್ಲಿ ಬೃಹತ್ ಸಂಖ್ಯೆಯೊಂದಿಗೆ ಭಾಗವಹಿಸಿ- ಬೆಂಬಲಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿಯೂ
ಸುನ್ನೀ ನಾಯಕರು, ಕಾರ್ಯಕರ್ತರು ಹಾಗೂ ಸರ್ವ ಸದಸ್ಯರು ಈ ಸಭೆಯನ್ನು ಪ್ರಚಾರ ಪಡಿಸಿ ಯಶಸ್ವಿಗೊಳಿಸಬೇಕಾಗಿಯೂ
ಸುನ್ನೀ ಉಲಮಾ ಒಕ್ಕೂಟ , ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್,ಕರ್ನಾಟಕ ಮುಸ್ಲಿಂ ಜಮಾಅತ್ , ಸುನ್ನೀ ಅಧ್ಯಾಪಕ ಒಕ್ಕೂಟ, ಎಸ್ ವೈ ಎಸ್, ಎಸ್ಸೆಸ್ಸೆಫ್,ಹಾಗೂ ಎಸ್ ಎಮ್ ಎ, ಸಮಿತಿಗಳು ಕರೆ ನೀಡಿರುವುದಾಗಿ ಜಿಲ್ಲಾ ಸಂಚಾಲಕ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.