janadhvani

Kannada Online News Paper

ಮನಸ್ಸಿನ ಬದಲಾವಣೆ ಮನುಷ್ಯನ ಬದಲಾವಣೆಯಾಗಿದೆ: ಜಿದ್ದಾದಲ್ಲಿ ಡಾ| ಶೇಖ್ ಬಾವ ಮಂಗಳೂರು

ಕೆಸಿಎಫ್ ಜಿದ್ದಾ ಝೋನ್ ಹಾಗೂ ಶರಫಿಯ್ಯಾ ಸೆಕ್ಟರ್ ಜಂಟಿ ಆಶ್ರಯದಲ್ಲಿ ಆತ್ಮೀಯ ಮಜ್ಲಿಸ್ & ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವಾ ಮಂಗಳೂರು ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ದಿನಾಂಕ 27/12/2019 ರಂದು ಜುಮುಆ ನಮಾಝಿನ್ ಬಳಿಕ ಕೆಸಿಎಫ್ ಭವನ ಶರಫಿಯ್ಯಾದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮೊದಲಿಗೆ ಸಯ್ಯಿದ್ ಝಕರಿಯ್ಯಾ ಸಖಾಫಿ ತಂಙಳ್ ರವರ ನೇತ್ರತ್ವದಲ್ಲಿ ಆತ್ಮೀಯ ಮಜ್ಲಿಸ್ ನಡೆಯಿತು. ನಂತರ ಆತ್ಮೀಯ ಮಜ್ಲಿಸ್ ಇದರ ಮಹತ್ವವನ್ನು ಸಯ್ಯಿದ್ ನಾಫೀ ತಂಙಳ್ ಹಾಗೂ ಅಬ್ದುಲ್ ಹಮೀದ್ ಫೈಝಿ ಉಸ್ತಾದರು ಕಾರ್ಯಕರ್ತರಿಗೆ ಸವಿಸ್ತಾರವಾಗಿ ವಿವರಿಸಿದರು.

ಆತ್ಮೀಯ ಮಜ್ಲಿಸ್ ನ ನಂತರ ಸಭಾ ಕಾರ್ಯಕ್ರಮವು ಜಿದ್ದಾ ಝೋನಲ್ ಕೋಶಾಧಿಕಾರಿಯಾದ ಸಿದ್ದೀಕ್ ಬಾಳೆಹೊನ್ನೂರು ರವರ ಅಧ್ಯಕ್ಷತೆಯಲ್ಲಿ ಆರಂಭಿಸಿತು. ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರ್ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವಾ ಮಂಗಳೂರು ರವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ನಂತರ ಕಾರ್ಯಕರ್ತ ರೊಂದಿಗೆ ಮಾತನಾಡಿದ ಬಾವಾ ರವರು ನಾವು ಕೆಸಿಎಫ್ ಸದಸ್ಯರು ಇತರರಿಗೆ ಮಾದರಿಯಾಗಬೇಕು. ನಮ್ಮ ಸ್ವಭಾವವನ್ನು ನೋಡಿ ಇತರರು ನಮ್ಮ ಸಂಘಟನೆಗೆ ಆಕರ್ಷಿತರಾಗುವಂತೆ ಮಾಡಬೇಕು. ಒಬ್ಬ ಮನುಷ್ಯನ ಮನಸ್ಸು ಬದಲಾದರೆ ಅದು ಆ ಮನುಷ್ಯನೇ ಬದಲಾದಂತೆ. ಸಾಧ್ಯವಾದಷ್ಟು ಸಾಂತ್ವನ ಕಾರ್ಯಗಳನ್ನು ಹೆಚ್ಚಿಸಬೇಕು. ದಾನ-ಧರ್ಮಗಳನ್ನು ಮಾಡಲು ಇತರರು ಹೇಳುವವರಿಗೆ ಕಾಯಬಾರದು ನಮ್ಮಿಂದಾಗುವ ಮಟ್ಟದಲ್ಲಿ ನಾವು ಈ ಸಾಂತ್ವನ ಕಾರ್ಯಗಳನ್ನು ನಡೆಸುತ್ತಾ ಬರಬೇಕು ಎಂಬ ಕಿವಿಮಾತನ್ನು ಹೇಳಿದರು.

ಅಲ್-ಮರ್ಕಝುಲ್ ಇಸ್ಲಾಮಿ ಕಲ್ಚರಲ್ ಸೆಂಟರ್ ಇದರ ಕಾಮಗಾರಿಯ ವಿಷಯವನ್ನು ಹಾಗೂ ಅದರ ಸಂಪೂರ್ಣತೆಗೆ ನಾವು ಮಾಡಬೇಕಾದ ಸೇವೆಯನ್ನೂ ಅವರು ಭಾಷಣದಲ್ಲಿ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಉಮ್ಮರ್ ಸಖಾಫಿ ಪರಪ್ಪು, ಜಿದ್ದಾ ಝೋನಲ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮೂಸಾ ಹಾಜಿ ಕಿನ್ಯಾ, ಹಿರಿಯ ನೇತಾರರಾದ ಶಾಹುಲ್‌ ಹಮೀದ್ ಸಾಗರ, ಶರಫಿಯ್ಯಾ ಸೆಕ್ಟರ್ ಅಧ್ಯಕ್ಷರಾದ ಅಶ್ರಫ್ MSM, ಶಂಸುದ್ದೀನ್ ಮಡಂತ್ಯಾರ್, ಬವಾದಿ ಸೆಕ್ಟರ್ ಅಧ್ಯಕ್ಷರಾದ ಸುಲೈಮಾನ್ ಬಂಡಾಡ್, ಮಕ್ಕತುಲ್ ಮುಕರ್ರಮ ಸೆಕ್ಟರ್ ಅಧ್ಯಕ್ಷರಾದ ಉಮರುಲ್ ಫಾರೂಕ್ ಹನೀಫಿ ಬೋವು ಇನ್ನಿತರ ನೇತಾರರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಅಬ್ದುಲ್ ಸಲಾಂ ಎಣ್ಮೂರು ರವರು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಜಿದ್ದಾ ಝೋನ್ ಪ್ರ. ಕಾರ್ಯದರ್ಶಿ ಇಬ್ರಾಹಿಮ್ ಕಿನ್ಯಾ ರವರು ಧನ್ಯವಾದ ಹೇಳಿದರು.

error: Content is protected !! Not allowed copy content from janadhvani.com