janadhvani

Kannada Online News Paper

ಪೌರತ್ವ ಕಾಯ್ದೆ ಹಾಗೂ ಪೊಲೀಸ್ ದೌರ್ಜನ್ಯದ ವಿರುದ್ಧ ನೂಜಿ ಯಲ್ಲಿ ಪ್ರತಿಭಟನೆ

ಅಂಬೇಡ್ಕರ್ ವಿರಚಿತ ಸಂವಿಧಾನದ ಮೂಲ ಆಶಯವಾದ ಸಮಾನತೆ ಮತ್ತು ಜಾತ್ಯಾತೀತ ತತ್ವಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ CAA ಮತ್ತು ಉದ್ದೇಶಿತ NRC & NPR ವಿರುದ್ಧ ಬದ್ರಿಯಾ ಜುಮಾ ಮಸ್ಜಿದ್, ನೂಜಿ. ಇಲ್ಲಿ ಶುಕ್ರವಾರ ಜುಮಾ ಪ್ರಾರ್ಥನೆಯ ಬಳಿಕ ಪ್ರತಿಭಟನೆ ನಡೆಸಲಾಯಿತು.

ಜಮಾಅತ್ ಖತೀಬ್ ಎಂ. ಅಬೂಬಕರ್ ಸಖಾಫಿ ಮುಂಚೂಣಿ ಪ್ರಭಾಷಣ ಮಾಡಿದರು. ಪ್ರತಿಭಟನಾಕಾರರು ಘೋಷಣಾಫಲಕವನ್ನು ಹಿಡಿದು ಸಂವಿಧಾನ ವಿರೋಧಿ ಕಾನೂನಿನ ವಿರುದ್ಧ ಘೋಷಣೆಯನ್ನು ಕೂಗಿದರು. ಊರಿನ ಹಿರಿಯರು, ಯುವಜನರು ಮತ್ತು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.