ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಅಳೇಕಲ ಉಳ್ಳಾಲ ಜಮಾಅತಿನ ವತಿಯಿಂದ, ಮಂಗಳೂರಿನಲ್ಲಿ ಪೋಲೀಸರು ನಡೆಸಿದ ಅಮಾಯಕರಿಬ್ಬರ ಕೊಲೆ ಮತ್ತು ಇತರ ಐದಾರು ಮಂದಿಯ ಮೇಲೆ ಮಾರಣಾಂತಿಕ ದಾಳಿ, ದೌರ್ಜನ್ಯದ ವಿರುದ್ದ ಭಿತ್ತಿಪತ್ರ ಪ್ರದರ್ಶನ ಮತ್ತು ಘೋಷವಾಕ್ಯಗಳನ್ನು ಕೂಗುವ ಮೂಲಕ ಪ್ರತಿಭಟನಾ ಸಭೆಯು, ಮಸೀದಿಯ ಮುಂಬಾಗದಲ್ಲಿ ಇಂದು (27-12)ಜುಮಾ ನಮಾಝ್ ಬಳಿಕ ನಡೆಯಿತು.
ಆಡಳಿತ ಸಮಿತಿಯ ಅಧ್ಯಕ್ಷರಾದ ಶಿಹಾಬುದ್ದೀನ್ ಸಖಾಫಿ ಉಸ್ತಾದರು ಅಧ್ಯಕ್ಷತೆ ವಹಿಸಿದ್ದರು.
ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದ್, ಮಾಜಿ ಕೌನ್ಸಿಲರ್ ಆಬ್ದುಲ್ ಫತಾಕ್, ಕೌನ್ಸಿಲರ್ ಅಸ್ಗರ್ ಅಲಿ, ಮಸೀದಿಯ ಪ್ರ ಕಾರ್ಯದರ್ಶಿ ಯು ಫಾರೂಕ್ ಹಾಜಿ, ಉಪಾಧ್ಯಕ್ಷ ಯು ಡಿ ಅಶ್ರಫ್, ಕೋಶಾದಿಕಾರಿ ಯು.ಸಿ ಇಬ್ರಾಹಿಂ, ಮಸೀದಿಯ ಸಂಚಾಲಕ ರಿಯಾಝ್ ಪುಲ್ಯಡಿ, ಕಾರ್ಯದರ್ಶಿ ಗಳಾದ ಶರೀಫ್ ಕಕ್ಕೆತೋಟ, ಜಾಫರ್ ಯು.ಎಸ್ , ಸಾಮಾಜಿಕ ಮುಖಂಡ ಯು ಎನ್ ಜಾಫರ್, ಯು ಎಸ್ ಸಲೀಂ, ಸಹಿತ ಜಮಾಅತಿನ ವಿವಿಧ ಸಂಘಟಣೆಗಳ ಪದಾದಿಕಾರಿಗಳು, ಕಾರ್ಯಕರ್ತರು ಮತ್ತು ಊರಿನ ನಾಗರಿಕರು ಭಾಗವಹಿಸಿದ್ದರು.