ಧಾರ್ಮಿಕ- ಲೌಕಿಕ ಸಮನ್ವಯದ ಪ್ರಥಮ ವಿದ್ಯಾಸಂಸ್ಥೆ ಜಾಮಿಅ ಸಅದಿಯ ಅರಬಿಯ ಕಾಸರಗೋಡು ಇದರ ಗೋಲ್ಡನ್ ಜ್ಯುಬಿಲಿಯು ಡಿಸೆಂಬರ್ 27,28,29 ರಂದು ನಡೆಯಲಿದ್ದು, ಕಾರ್ಯಕರ್ತರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಕರೆ ನೀಡಿದ್ದಾರೆ.
1971 ರಿಂದ ಸಣ್ಣ ಪ್ರಮಾಣದಲ್ಲಿ ತನ್ನ ಮನೆ ಹಾಗೂ ಜಾಗವನ್ನು ಮರ್ಹೂಂ ಕಲ್ಲಟ್ರ ಖಾದಿರ್ ಹಾಜಿಯವರು ಸಂಸ್ಥೆಗೆ ನೀಡಿದ್ದು, ನಂತರ ಅದು ವಿಶ್ವವಿಖ್ಯಾತ ಇಸ್ಲಾಮಿಕ್ ಯುನಿವರ್ಸಿಟಿಯಾಗಿ ಬದಲಾದದ್ದು ಇತಿಹಾಸ. ಮೂವತ್ತರಷ್ಟು ಅಧೀನ ಸಂಸ್ಥೆಗಳನ್ನು ಹೊಂದಿರುವ ಸಅದಿಯದಲ್ಲಿ ಹತ್ತು ಸಾವಿರದಷ್ಟು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಪ್ರಸ್ತುತ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತಿಳಿಸಿದೆ.