ಬೆಳ್ತಂಗಡಿ, ಡಿ.26: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್.ಆರ್.ಸಿ.) ಮತ್ತು ಪೌರತ್ವ ತಿದ್ದುಪಡಿ (ಸಿಎಎ) ಕಾಯ್ದೆ ವಿರೋಧಿಸಿ ಬೆಳ್ತಂಗಡಿ ತಾಲೂಕಿನಲ್ಲಿ ತಾಲೂಕು ಸಂಯುಕ್ತ ಜಮಾಅತ್ ಮತ್ತು ತಾಲೂಕು ಮುಸ್ಲಿಂ ಒಕ್ಕೂಟ, ಸಮಸ್ತ ಮಹಲ್ ಫೆಡರೇಶನ್, ಎಸ್ಸೆಸ್ಸೆಫ್, ಎಸ್ಕೆಎಸ್ಸೆಸ್ಸೆಫ್, ಪಿಎಫ್ ಐ, ಸಿಪಿಎಂ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ಗುರುವಾರ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಮುಸ್ಲಿಂ ಸಮಾಜದ ಎಲ್ಲ ಸಂಘ ಸಂಸ್ಥೆಗಳು, ಪ್ರಮುಖರು ಒಗ್ಗಟ್ಟನಿಂದ ಭಾಗವಹಿಸಿದ್ದರು.
ಪತ್ರಕರ್ತ, ಖ್ಯಾತ ಅಂಕಣಕಾರ ಹರ್ಷ ಕುಮಾರ್ ಕುಗ್ವೆ, ಖ್ಯಾತ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೇಪಾಡಿ, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಕ್ಬಾಲ್ ಬೆಳ್ಳಾರೆ ಮುಂತಾದವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದ ವೇದಿಕೆಯಲ್ಲಿ ಸಹಾಯಕ ಖಾಝಿ ಸೈಯದ್ ಸಾದಾತ್ ತಂಙಳ್, ಸೈಯದ್ ಕಾಜೂರು ತಂಙಳ್, ಮುಹಮ್ಮದ್ ಇಂಬಿಚ್ಚಿಕೋಯ ತಂಙಳ್ ಮುರ, ಫಝಲ್ ಜಮಾಲುಲ್ಲೈಲಿ ತಂಙಳ್, ಡಾ.ಕಾವಳಕಟ್ಟೆ ಹಝ್ರತ್, ಐ.ಕೆ.ಮೂಸಾ ದಾರಿಮಿ, ಜಿಪಂ ಸದಸ್ಯ ಕೆ.ಕೆ.ಶಾಹುಲ್ ಹಮೀದ್, ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ಸೈಯದ್ ಎಸ್.ಎಂ.ಕೋಯ ತಂಙಳ್, ಎಸ್ಕೆಎಸ್ಸೆಸ್ಸೆಫ್ ತಾಲೂಕು ಅಧ್ಯಕ್ಷ ನಝೀರ್ ಅಝ್ಹರಿ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಬಿ.ಎ.ನಝೀರ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿಯ ಸದಸ್ಯ ಹೈದರ್ ನೀರ್ಸಾಲ್, ಸಿಪಿಎಂ ತಾ.ಕಾರ್ಯದರ್ಶಿ ನ್ಯಾಯವಾದಿ ಶಿವಕುಮಾರ್ ಎಸ್.ಎಂ, ಮುಸ್ಲಿಂ ಒಕ್ಕೂಟದ ನಿಕಟ ಪೂರ್ವಾಧ್ಯಕ್ಷ ಚಾರ್ಮಾಡಿ ಹಸನಬ್ಬ, ಕೋಶಾಧಿಕಾರಿ ಬಿ.ಎಂ.ಅಬ್ದುಲ್ ಹಮೀದ್ ಹಾಜಿ ಉಜಿರೆ, ವಕ್ಫ್ ಬೋರ್ಡ್ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಬ್ದುಲ್ ರಝಾಕ್ ಸಖಾಫಿ, ದಸಂಸ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ನೇಮಿರಾಜ್ ಕಿಲ್ಲೂರು, ನಾಗರಾಜ್ ಲಾಯಿಲ, ದಾಮೋಧರ ಭಟ್, ಅರೆಕ್ಕಲ್ ಮಮ್ಮಿಕುಂಞಿ, ಸಾದಿಕ್ ಮಾಸ್ಟರ್ ಮಲೆಬೆಟ್ಡು, ಅಕ್ಬರ್ ಬೆಳ್ತಂಗಡಿ, ಮಡಂತ್ಯಾರು ಜಿಪಂ ಸದಸ್ಯ ಶೇಖರ್ ಕುಕ್ಕೇಡಿ, ಎಪಿಎಂಸಿ ಉಪಾಧ್ಯಕ್ಷ ಅಬ್ದುಲ್ ಗಫೂರ್, ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ, ದಸಂಸ ಮುಖಂಡ ಚಂದು ಎಲ್. ಹಾಗೂ ಇತರರು ಉಪಸ್ಥಿತರಿದ್ದರು.