ದುಬೈ: ಕೊಡಗು ಜಿಲ್ಲೆಯ ಸಮನ್ವಯ ವಿದ್ಯಾ ಕೇಂದ್ರ ಅನ್ವಾರುಲ್ ಹುದಾ ಸೆಂಟರ್ ವಿರಾಜಪೇಟೆ ಇದರ ಯುಎಇ ಸಮಿತಿ ಆಶ್ರಯದಲ್ಲಿ ಅಸ್ಮಾಉಲ್ ಹುಸ್ನಾ ವಾರ್ಷಿಕ ಮತ್ತು ದುಆ ಮಜ್ಲಿಸ್ ನಾಳೆ ಸಂಜೆ 27/12/2019 ರಂದು ಶುಕ್ರವಾರ 7 ಘಂಟೆಗೆ ದುಬೈ ಹೃದಯ ಭಾಗವಾದ ದೇರಾ ಬನಿಯಾಸ್ ಮೆಟ್ರೋ ಸ್ಟೇಷನ್ ಹತ್ತಿರದ ಲ್ಯಾಂಡ್ ಮಾರ್ಕ್ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ.
ಸಯ್ಯದ್ ಶಾಫಿ ಬಾ ಅಲವಿ (ಮದೀನತುಲ್ ಮುನವ್ವರ) ರವರ ನೇತೃತ್ವದಲ್ಲಿ ಅಸ್ಮಾಉಲ್ ಹುಸ್ನಾ ಮತ್ತು ಪ್ರಾರ್ಥನಾ ಮಜ್ಲಿಸ್ ನಡೆಯಲಿದ್ದು, ಅನ್ವಾರುಲ್ ಹುದಾ ಶಿಲ್ಪಿಯೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಅಶ್ರಫ್ ಅಹ್ಸನಿ ಮುಖ್ಯ ಭಾಷಣ ಮಾಡಲಿದ್ದಾರೆ.
ಅನ್ವಾರುಲ್ ಹುದಾ ಯುಎಇ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಹಾಜಿ ಕೊಂಡಂಗೇರಿ ರವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಲೀಲ್ ನಿಝಾಮಿ ಎಮ್ಮೆಮಾಡು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ಕ್ಯಾಬಿನೆಟ್ ನಾಯಕರಾದ ಉಸ್ಮಾನ್ ಹಾಜಿ ನಾಪೋಕ್ಲು, ಇಬ್ರಾಹಿಂ ಫೈಝಿ ಚಾಮಿಯಾಲ್, ಶಾಹುಲ್ ಹಮೀದ್ ಸಖಾಫಿ ಮಾದಾಪುರ (ಕಾರ್ಯದರ್ಶಿ, ಶಿಕ್ಷಣ ವಿಭಾಗ ಕೆಸಿಎಫ್ ಯುಎಇ), ಅಬ್ದುಲ್ ರಹ್ಮಾನ್ ಸಖಾಫಿ ಮಾದಾಪುರ (ಅಧ್ಯಕ್ಷರು, ಕೆಸಿಎಫ್ ನಖೀಲ್ ಸೆಕ್ಟರ್), ಹಮೀದ್ ನಾಪೋಕ್ಲು, ಸತ್ತಾರ್ ನಾಪೋಕ್ಲು, ಅಹ್ಮದ್ ಚಾಮಿಯಾಲ್, ರಫೀಕ್ ಚಾಮಿಯಾಲ್ ಸೇರಿದಂತೆ ಹಲವು ನಾಯಕರುಗಳು ಭಾಗವಹಿಸಲಿದ್ದಾರೆ.
ಯುಎಇ ಯಲ್ಲಿರುವ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಅನ್ವಾರುಲ್ ಹುದಾ ಯುಎಇ ಸಮಿತಿ ಪ್ರಧಾನ ಕಾರ್ಯದರ್ಶಿ ಸಲೀಂ ಗುಂಡಿಗೆರೆ ಹಾಗೂ ಸ್ವಾಗತ ಸಮಿತಿ ಕನ್ವಿನರ್ ಇಸ್ಮಾಯಿಲ್ ಮೂರ್ನಾಡು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.