ತಾಜುಲ್ ಉಲಮಾ ಜೀವನ ನಮಗೆಲ್ಲರಿಗೂ ಮಾದರಿಯಾಗಲಿ- ಸಯ್ಯಿದ್ ಮದಕ ತಂಙಳ್
ಬಂಟ್ವಾಳ:ಮದನೀಸ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ ಇತ್ತೀಚೆಗೆ ಸಾಲೆತ್ತೂರು BH ನಗರ ಮಸ್ಜಿದ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಬಿ ಅಬ್ದುರ್ರಹ್ಮಾನ್ ಮದನಿ ಮದ್ಯನಡ್ಕ ವಹಿಸಿದ್ದರು.ಸ್ಥಳೀಯ ಖತೀಬ್ ಅಬೂಬಕ್ಕರ್ ಸಿದ್ದೀಖ್ ಪಾಳಿಲಿ ಸಭೆಯನ್ನು ಉದ್ಘಾಟಿಸಿದರು.
ಕೇಂದ್ರ ಮದನೀಸ್ ಕಾರ್ಯದರ್ಶಿ ಕೆ.ಎಂ ಮುಹಿಯ್ಯದ್ದೀನ್ ಮದನಿ ಕಟ್ಟತ್ತಿಲ ಆಶಂಸ ಭಾಷಣ ಮಾಡಿದರು.

ಮದನೀಸ್ ವೆಸ್ಟ್ ಝೋನ್ ಅಧ್ಯಕ್ಷರಾದ ಅಬೂಬಕ್ಕರ್ ಮದನಿ ಮುದುಂಗಾರು ಕಟ್ಟೆ ಅನುಸ್ಮರಣೆ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸೆಯ್ಯದ್ ಮದಕ ತಂಙಳ್ ದುಆ ಮಜ್ಲಿಸ್ ಗೆ ನೇತೃತ್ವ ನೀಡಿದರು.ವೇದಿಕೆಯಲ್ಲಿ BH ನಗರ ಮಸ್ಜಿದ್ ಅಧ್ಯಕ್ಷರಾದ ಮುಹಮ್ಮದ್ ಮದನಿ ಹಾಗೂ SJM ಸುರಿಬೈಲ್ ರೇಂಜ್ ಪ್ರ.ಕಾರ್ಯದರ್ಶಿ ಮುಹಮ್ಮದ್ ರಫೀಖ್ ಝುಹ್ರಿ ಹಾಗೂ ಇನ್ನಿತರ ಉಲಮಾಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ದಲ್ಲಿ ತಾಜುಲ್ ಉಲಮಾ ಮೌಲಿದ್ ಹಾಗೂ ತಹ್ ಲೀಲ್ ಮಜ್ಲಿಸ್ ನಡೆಯಿತು.
ಅಕ್ಬರ್ ಅಲಿ ಮದನಿ ಸ್ವಾಗತಿಸಿ ನಿರೂಪಿಸಿದರು.
🖎ಪ್ರ.ಕಾರ್ಯದರ್ಶಿ ಮುಹಮ್ಮದ್ ರಫೀಖ್ ಮದನಿ ಪಾಟ್ರಕೋಡಿ






