janadhvani

Kannada Online News Paper

ಮಂಗಳೂರು:ನಿಷೇಧಾಜ್ಞೆ ಮುಂದುವರಿಕೆ- ಜನಜೀವನ‌ ಸಾಮಾನ್ಯ ಸ್ಥಿತಿಗೆ

ಮಂಗಳೂರು: ನಗರದಲ್ಲಿ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಕರ್ಫ್ಯೂ ಹಿಂಪಡೆಯಲಾಗಿದೆ. ಜನಜೀವನ‌ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.ಶಾಲಾ‌- ಕಾಲೇಜುಗಳು ‌ಆರಂಭವಾಗಿವೆ. ಬಸ್‌ಗಳು ಎಂದಿನಂತೆ ರಸ್ತೆಗಿಳಿದಿವೆ. ಮಾರುಕಟ್ಟೆಯಲ್ಲಿ ಅಂಗಡಿಗಳು ಬಾಗಿಲು ತೆರೆದಿವೆ.‌ ಅಟೊರಿಕ್ಷಾ, ಕಾರು‌ ಸೇರಿದಂತೆ ಎಲ್ಲ‌ ವಾಹನಗಳು‌ ರಸ್ತೆಗೆ ಇಳಿದಿವೆ.

ಪ್ರತಿಭಟನೆಗೆ ಅವಕಾಶ ಇಲ್ಲ: ನಗರದಾದ್ಯಂತ ಕರ್ಫ್ಯೂ ಹಿಂಪಡೆಯಲಾಗಿದ್ದರೂ, ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು‌ ಸ್ಪಷ್ಟಪಡಿಸಿದ್ದಾರೆ.

ನಗರದ ಸೂಕ್ಷ್ಮ ಪ್ರದೇಶಗಳಲ್ಲಿ‌ತೀವ್ರ ನಿಗಾ ಇಡಲಾಗಿದೆ. ಹಿರಿಯ ಅಧಿಕಾರಿಗಳು ನಗರದಲ್ಲಿ‌ ಠಿಕಾಣಿ‌ ಹೂಡಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ.ಈ ಮೊದಲು‌‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಕೆಲಸ ಮಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಗರಕ್ಕೆ‌ ಕರೆಸಿಕೊಳ್ಳಲಾಗಿದ್ದು, ಪರಿಸ್ಥಿತಿಯ ನಿಯಂತ್ರಣಕ್ಕೆ‌ ಕ್ರಮ ಕೈಗೊಳ್ಳಲಾಗಿದೆ.