ಮಂಗಳೂರು: ಪೋಲೀಸ್ ಗೋಲಿಬಾರ್ ನಲ್ಲಿ ಮೃತಪಟ್ಟ ಅಬ್ದುಲ್ ಜಲೀಲ್ ರವರ ಎರಡು ಮಕ್ಕಳನ್ನು ಜಾಮಿಅಃ ಸಅದಿಯ್ಯಃ ಅರಬಿಯ್ಯಃ ಕಾಸರಗೋಡು ದತ್ತು ಪಡೆದಿದೆ.
ಡಿ.19 ರಂದು ಮಂಗಳೂರು ನಗರದಲ್ಲಿ ಕೆಲಸ ನಿರ್ವಹಿಸಿ ಮನೆಗೆ ಮರಳುತ್ತಿದ್ದ ವೇಳೆ ಕುದ್ರೋಳಿಯ ನೌಶೀನ್ ಹಾಗೂ ಖಂದಕ್ ಅಬ್ದುಲ್ ಜಲೀಲ್ ಎಂಬ ಇಬ್ಬರು ಪೋಲೀಸರ ಗುಂಡೇಟಿಗೆ ಬಲಿಯಾಗಿದ್ದರು.
ಇಂದು ಮೃತರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ಸಾಂತ್ವನ ಪಡಿಸಿದ ಸಅದಿಯ್ಯ ಪ್ರಿನ್ಸಿಪಾಲ್ ಹಾಗೂ ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಬೇಕಲ್ ಇಬ್ರಾಹಿಮ್ ಮುಸ್ಲಿಯಾರ್ ಈ ವಿಷಯವನ್ನು ಘೋಷಿಸಿದರು.
ಈ ವೇಳೆ ಕೋರ್ಪರೇಟರ್ ಅಬ್ದುಲ್ ಲತ್ವೀಫ್, ಅರ್ಷದ್ ಖಂದಕ್, ಅಝರ್ ಖಂದಕ್,ಸುನ್ನೀ ಕೋಆರ್ಡಿನೇಶನ್ ಸಮಿತಿಯ ಅಧ್ಯಕ್ಷ ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಕಾರ್ಯದರ್ಶಿ ಅಶ್ರಫ್ ಕಿನಾರ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಯಾಕೂಬ್ ಸಅದಿ ನಾವೂರು ಮತ್ತಿತರರು ಉಪಸ್ಥಿತರಿದ್ದರು.






