janadhvani

Kannada Online News Paper

ಪೋಲೀಸ್ ಕಮಿಷನರ್ ಹರ್ಷರನ್ನು ವಜಾ ಮಾಡಬೇಕು-ಕಂದಾವರ ಜಮಾಅತ್ ಆಗ್ರಹ

ಗುರುಪುರ: ಕೈಕಂಬ ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರಪದವು ಜಮಾಅತ್ ವತಿಯಿಂದ ಜುಮಾ ನಮಾಝಿನ ಬಳಿಕ NRC ಹಾಗು CAB ವಿರುದ್ಧ ಬ್ರಹತ್ ಪ್ರತಿಭಟನೆ ನಡೆಯಿತು.

ಮಂಗಳೂರಿನಲ್ಲಿ ಮುನ್ನೂರು ರಷ್ಟು ಯುವಕರು NRC CAA ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ಅವರ ಮೇಲೆ ಪೋಲಿಸರ ಮೂಲಕ ಹಲ್ಲೆ, ದೌರ್ಜನ್ಯ, ಹಿಂಸೆ ಹರಡಿದ್ದು ಅಲ್ಲದೇ ಇಬ್ಬರು ಯುವಕರನ್ನು ಉದ್ದೇಶ ಪೂರ್ವಕವಾಗಿ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆಯನ್ನು ಈ ಸಂದರ್ಭದಲ್ಲಿ ಖಂಡಿಸಲಾಯಿತು.

ಇದರ ಸಂಪೂರ್ಣ ಹೊಣೆಗಾರ ಪೋಲೀಸ್ ಕಮಿಷನರ್ ಹರ್ಷ ಆಗಿದ್ದು ಜಿಲ್ಲೆಯ ಜನತೆ ಕಮಿಷನರ ಹಠಮಾರಿ ತನದ ಕೆಟ್ಟ ವರ್ತನೆಯಿಂದ ಆಕ್ರೋಶಿತರಾಗಿದ್ದಾರೆ.ರಾಜ್ಯ ಸರಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಮಿಷನರ್ ಹರ್ಷರ ಮೇಲೆ ಕೊಲೆ ಕೇಸು ದಾಖಲಿಸಿ ಸೇವೆಯಿಂದ ವಜಾ ಮಾಡಬೇಕು.

ನಿಧನರಾದ ಯುವಕರ ಕುಟುಂಬಕ್ಕೂ ಪೋಲೀಸರ ದೌರ್ಜನ್ಯದಿಂದ ತೊಂದರೆ ಗೊಳಗಾದವರಿಗೂ ಬಂಧನ ಕ್ಕೊಳಗಾದವರಿಗೂ ನ್ಯಾಯ ಮತ್ತು ಸೂಕ್ತವಾದ ಪರಿಹಾರ ದೊರಕಿಸಿ ಕೊಡಬೇಕು. ಯಾವುದೇ ಕಾರಣಕ್ಕೂ NRC ಕಾನೂನು ಜಾರಿಯಾಗಬಾರದೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದು NRC ಮತ್ತು CAA ವಿರುದ್ಧ ನಮ್ಮ ಹೋರಾಟ ಮಂದುವರಿಯಲಿದೆ ಎಂದು ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರಪದವು ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾಬ್ ಅಬ್ದುರ್ರಹ್ಮಾನ್ ಮೂನ್ಲೈಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ .

error: Content is protected !! Not allowed copy content from janadhvani.com