janadhvani

Kannada Online News Paper

ಡಿ.18 ಕ್ಕೆ ಮಾಣಿ ಉಸ್ತಾದ್,ಹಂಝ ಮಿಸ್ಬಾಹಿ ಓಟ್ಟಪದವು ನೆಕ್ಕಿಲ್’ಗೆ

ಉಪ್ಪಿನಂಗಡಿ: SSF ನೆಕ್ಕಿಲು ಶಾಖೆ ಇದರ ಆಶ್ರಯದಲ್ಲಿ ತೃತೀಯ ಜಲಾಲಿಯ್ಯಾ ವಾರ್ಷಿಕ, ಅಗಲಿದ ನೇತಾರರ ಅನುಸ್ಮರಣೆ ಹಾಗೂ ಸ‌ಅದಿಯ್ಯಾ ಗೋಲ್ಡನ್ ಜ್ಯುಬಿಲಿ ಪ್ರಚಾರ ಸಮಾವೇಶ ನಡೆಯಲಿದೆ.

ದಿನಾಂಕ 18-12-2019 ಬುಧವಾರ ಮಗ್ರಿಬ್ ನಮಾಝ್ ಬಳಿಕ ತಾಜುಲ್ ಉಲಮಾ ವೇದಿಕೆ,ASJM ನೆಕ್ಕಿಲು ಮಸ್ಜಿದ್ ವಠಾರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್,ಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟ್ಟಪದವು, ಮಸ್‌ಊದ್ ಸ‌ಅದಿ ಪದ್ಮುಂಜ ಆಗಮಿಸಲಿದ್ದಾರೆ ಎಂದು SSF ನೆಕ್ಕಿಲು ಶಾಖಾಧ್ಯಕ್ಷ ಅಶ್ರಫ್ ಮದನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.