ವಿಟ್ಲ, ಡಿ.14: ಸುರಿಬೈಲು ದಾರುಲ್ ಅಶ್ ಅರಿಯ್ಯದಲ್ಲಿ ಶೈಖುನಾ ಸುರಿಬೈಲು ಉಸ್ತಾದ್ ಅವರ 18 ನೇ ಆಂಡ್ ನೇರ್ಚೆ, ಶೈಖುನಾ ಮರ್‌ಹೂಂ ಪಿ.ಎ ಉಸ್ತಾದ್ ಅನುಸ್ಮರಣೆ, ಹನೀಫಿ ಸನದುದಾನ ಮಹಾಸಮ್ಮೇಳನದ ಸಮಾರೋಪ ಸಮಾರಂಭವು ನಿನ್ನೆ ಅದ್ದೂರಿಯಾಗಿ ಸಮಾಪ್ತಿಗೊಂಡಿದೆ.ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರ,ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ ಯವರು, NRC ಬಗ್ಗೆ ಮುಸ್ಲಿಮರೆಡೆಯಲ್ಲಿ ಗೊಂದಲವಿದೆ, ಕೇವಲ ಪ್ರತಿಭಟನೆ ಮಾಡಿದರೆ ಮಾತ್ರ ನಮಗೆ ನ್ಯಾಯ ಸಿಗುವುದಿಲ್ಲ, ಪರಸ್ಪರ ಮಾತುಕತೆ ನಡೆಸುವ ಅವಶ್ಯಕತೆ ಇದೆ. ಸದ್ಯದಲ್ಲಿಯೇ ಎಪಿ ಉಸ್ತಾದ್ ಅವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದ ಮೌಲನಾ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಅವರು ತಾವು ಪಡೆದ ಶಿಕ್ಷಣವನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯಬೇಕು. ಅಹಂಕಾರ, ಅಸೂಯೆ, ದ್ವೇಷ ಇಟ್ಟುಕೊಳ್ಳದೇ ಶುದ್ಧ ಮನಸ್ಸಿನಿಂದ ಜೀವನ ನಡೆಸಬೇಕು. ಪ್ರತಿಯೊಂದು ಒಳ್ಳೆಯ ಕಾರ್ಯ ಮಾಡುವಾಗ ದೇವರನ್ನು ಸ್ಮರಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ದಾರುಲ್ ಅಶ್ ಅರಿಯ್ಯದ ಅಧ್ಯಕ್ಷ ಮಹ್‌ಮೂದ್ ಫೈಝಿ ವಾಲೆಮುಂಡೋವ್ ಅಧ್ಯಕ್ಷತೆ ವಹಿಸಿದ್ದರು. ಶೈಖುನಾ ತಾಜುಲ್ ಫುಖಹಾಅ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿದರು. ಅಸ್ಸಯ್ಯಿದ್ ಅಶ್ರಫ್ ತಂಙಳ್ ಆದೂರು ದುಆ ಆಶೀರ್ವಚನ ನೀಡಿದರು. ಶೈಖುನಾ ತಾಜುಶ್ಯರೀ ಅಲಿಕುಂಞ ಉಸ್ತಾದ್ ಅನುಗ್ರಹ ಸಂದೇಶ ನೀಡಿದರು. ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ವಿದ್ಯಾರ್ಥಿಗಳಿಗೆ ಸನದುದಾನ ಮಾಡಿದರು.
ಈ ವೇಳೆ ಖತಮುಲ್ ಬುಖಾರಿ ಸಂಗಮ, ಸಾರ್ವಜನಿಕ ವೈದ್ಯಾಕೀಯ ಶಿಬಿರ, ಬೃಹತ್ ಆತ್ಮೀಯ ಸಂಗಮ, ಸೌಹಾರ್ದ ಸಂಗಮ ಬೃಹತ್ ಹನೀಫಿ ಸಂಗಮ, ಮಖ್‌ಬರ ಝಿಯಾರತ್, ಜಲಾಲಿಯ್ಯ ರಾತೀಬು ಸೇರಿದಂತೆ ಮೊದಲಾದ ಕಾರ್ಯಕ್ರಮಗಳು ನಡೆದವು.
ಶಿಹಾಬುದ್ದೀನ್ ತಂಙಳ್ ಮದಕ, ಅಬೂಬಕ್ಕರ್ ಮುಸ್ಲಿಯಾರ್ ಬೊಳ್ಮಾರ್, ಅಬೂಬಕ್ಕರ್ ಲತೀಫಿ ಎಣ್ಮೂರು, ಮಂಚಿ ಉಸ್ತಾದ್, ಅಬ್ದುಲ್ಲ ಮುಸ್ಲಿಯಾರ್ ದುಬೈ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಎಸ್‌ಎಂಎ ರಾಜ್ಯ ಸಮಿತಿ ಸದಸ್ಯ ಹಾಜಿ ಕೆ.ಎ ಹಮೀದ್ ಕೊಡಂಗಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಸುಲೈಮಾನ್ ಹಾಜಿ ಸಿಂಗಾರಿ ನಾರ್ಶ, ದಾರುಲ್ ಅಶ್ ಅರಿಯ್ಯದ ವ್ಯವಸ್ಥಾಪಕ ಮಹಮ್ಮದಾಲಿ ಸಖಾಫಿ, ಮುತ್ತಲಿಬ್ ಹಾಜಿ ನಾರ್ಶ, ಸೇರಿದಂತೆ ಹಲವು ಉಮರಾ ಉಲಮಾಗಳು ಉಪಸ್ಥಿತರಿದ್ದರು.