ಮಾಣಿ : ದಾರುಲ್ ಇರ್ಶಾದ್ ಎಜುಕೇಶನಲ್ ಸೆಂಟರ್ ಮಾಣಿ ಇದರ ಆಶ್ರಯದಲ್ಲಿ ಸ್ವಲಾತ್ ಹಾಗೂ ಖುತುಬಿಯ್ಯತ್ ವಾರ್ಷಿಕ ಸಮ್ಮೇಳನ ಕಾರ್ಯಕ್ರಮವು ಡಿಸೆಂಬರ್ 16 ಸೋಮವಾರ ಮಗ್ರಿಬ್ ನಮಾಝ್ ಬಳಿಕ ಮಾಣಿ ದಾರುಲ್ ಇರ್ಶಾದ್ ವಠಾರದಲ್ಲಿ ನಡೆಯಲಿದೆ.
ಸಂಸ್ಥೆಯ ಸಾರಥಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ಆಶೀರ್ವಚನದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ,ನಝೀರ್ ಅಮ್ಜದಿ ಸರಳಿಕಟ್ಟೆ ಸ್ವಾಗತ ಭಾಷಣ ಮಾಡಲಿರುವರು,ಹುಸೈನ್ ಅಹ್ಸನಿ ಮಾರ್ನಾಡ್ ಅಧ್ಯಕ್ಷತೆ ವಹಿಸಲಿರುವರು,ಯಾಕೂಬ್ ಸಅದಿ ಇರ್ದೆ ಪ್ರಾಸ್ತಾವಿಕ ಭಾಷಣ ನಡೆಸಿಕೊಡುವರು.ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಶರೀಫ್ ಸಖಾಫಿ ಮಾಣಿ ಸಂದೇಶ ಪ್ರಭಾಷಣ ಮಾಡಲಿದ್ದಾರೆ,ಮುಖ್ಯ ಪ್ರಭಾಷಣವನ್ನು ಯುವ ವಾಗ್ಮಿ ಇಸಾಕ್ ಮುಸ್ಲಿಯಾರ್ ಕುಟ್ಯಾಡಿ ನಡೆಸಿಕೊಡುವರು,ಸದಕತುಲ್ಲಾಹ್ ನದ್ವಿಯವರ ಗಣ್ಯ ಉಪಸ್ಥಿತಿಯಲ್ಲಿ ಹಲವಾರು ಉಲಮಾ ಉಮರಾ ನೇತಾರರು ಭಾಗವಹಿಸಲಿರುವರು ಎಂದು ಕಾರ್ಯಕ್ರಮ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






