janadhvani

Kannada Online News Paper

ಮಕ್ಕಾ-ಮದೀನಾ ಅಲ್ ಹರಮೈನ್ ರೈಲು ಸೇವೆ ಪುನರಾರಂಭ

ರಿಯಾದ್, ಡಿ.11: ಸೌದಿಯಲ್ಲಿ ತಾತ್ಕಾಲಿಕವಾಗಿ ಸ್ಥಿಗಿತಗೊಳಿಸಲಾದ ಮಕ್ಕಾ-ಮದೀನಾ ಸಂಚರಿಸುವ ಅಲ್-ಹರಮೈನ್ ರೈಲು ಸೇವೆಯು ಇಂದಿನಿಂದ ಪುನರಾರಂಭಗೊಳ್ಳಲಿದೆ.

ಜಿದ್ದಾ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ರೈಲು ಓಡಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಜಿದ್ದಾ ವಿಮಾನ ನಿಲ್ದಾಣದ ಬಳಿ ಹೊಸದಾಗಿ ತೆರೆಯಲಾದ ರೈಲ್ವೆ ನಿಲ್ದಾಣದ ಮೂಲಕ ಸೇವೆಯನ್ನು ಪುನರಾರಂಭಿಸಲಾಗುತ್ತಿದೆ.

ಎರಡು ತಿಂಗಳ ಹಿಂದೆ ಜಿದ್ದಾದ ಮುಖ್ಯ ರೈಲು ನಿಲ್ದಾಣವಾದ ಸುಲೈಮಾನಿಯಾ ರೈಲು ನಿಲ್ದಾಣವು ಬೆಂಕಿಗಾಹುತಿಯಾಗಿದ್ದು, ಇದರ ಬೆನ್ನಲ್ಲೇ ಮಕ್ಕಾ-ಮದೀನಾ ಅಲ್-ಹರಮೈನ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಬೆಂಕಿಯಿಂದ ಹಾನಿಗೊಳಗಾದ ನಿಲ್ದಾಣದ ಬದಲಾಗಿ ಜಿದ್ದಾ ಕಿಂಗ್ ಅಬ್ದುಲ್ ಅಝೀಝ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಬಳಿ ಮತ್ತೊಂದು ರೈಲ್ವೆ ನಿಲ್ದಾಣವನ್ನು ನಿರ್ಮಿಸುವ ಮೂಲಕ ಸೇವೆಯನ್ನು ಪುನರಾರಂಭಿಸಲಾಗಿದೆ.

ರೈಲು ಸೇವೆಯು ಇಂದಿನಿಂದ ಪುನರಾರಂಭಗೊಳ್ಳಲಿದೆ ಎಂದು ಅಲ್ ಹರಮೈನ್ ಎಕ್ಸ್‌ಪ್ರೆಸ್ ರೈಲು ಮಹಾ ನಿರ್ದೇಶಕ ರಯಾನ್ ಅಲ್ ಹರ್ಬಿ ತಿಳಿಸಿದ್ದಾರೆ