janadhvani

Kannada Online News Paper

ಮುಸ್ಲಿಮರು ಸಂವಿಧಾನಕ್ಕೆ ಹೆದರುವರು, ನಿಮಗಲ್ಲ- ಮೋದಿ, ಶಾ ವಿರುದ್ಧ ಕಪಿಲ್ ಸಿಬಲ್

ನವದೆಹಲಿ: ಭಾರತದ ಮುಸ್ಲಿಮರು ನಿಮಗೆ ಹೆದರುವುದಿಲ್ಲ. ಸಂವಿಧಾನಕ್ಕೆ ಮಾತ್ರ ಹೆದರುತ್ತಾರೆ ಎಂದು ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಕಪಿಲ್ ಸಿಬಲ್ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾಗೆ ತಿರುಗೇಟು ನೀಡಿದರು.

ಪೌರತ್ವ ತಿದ್ದಪಡಿ ಮಸೂದೆ ಮಂಡನೆಯ ವಿಚಾರವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಪೌರತ್ವ ಮಸೂದೆ ಜಾರಿ ಮಾಡಿ ಎಂದು ನಿಮಗೆ ಸಲಹೆ ನೀಡಿದವರು ಯಾರು? ಎಂದು ಪ್ರಶ್ನಿಸಿದರು.

ಜುರಾಸಿಕ್ ರಿಪಬ್ಲಿಕ್ ನಲ್ಲಿ ಬರೀ ಎರಡು ಡೈನೋಸರ್ ಇರುತ್ತವೆ ಎಂದು ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾರನ್ನು ವ್ಯಂಗ್ಯವಾಡಿದ ಅವರು, ಪಾಕಿಸ್ತಾನ ಅಥವಾ ಬಾಂಗ್ಲಾ ದೇಶದಲ್ಲಿ ಧರ್ಮದ ಆಧಾರದಲ್ಲಿ ಯಾರಾದರೂ ಕಿರುಕುಳ ನೀಡಿರುವ ಉದಾಹರಣೆ ನಿಮ್ಮ ಬಳಿಯಲ್ಲಿದೆಯೇ? ಎಂದು ಪ್ರಶ್ನಿಸಿದರು.