ಅಬುಧಾಬಿ: ಅಬುಧಾಬಿಯಾದ್ಯಂತ ಹೊಸ ಸಂಚಾರಿ ನಿಯಮವು ಡಿ.1ರಿಂದ ಜಾರಿಗೆ ಬಂದಿದೆ.ಕಿಂಗ್ ಅಬ್ದುಲ್ಲಾಹ್ ಬಿನ್ ಅಬ್ದುಲ್ ಅಝೀಝ್ ಸ್ಟ್ರೀಟ್‌ನ ಇಕ್ಕೆಲಗಳಲ್ಲಿನ ಬಲಬದಿಯ ಹಾದಿಗಳನ್ನು ತುರ್ತು ವಾಹನಗಳು, ಬಸ್‌ಗಳು ಮತ್ತು ಟಾಕ್ಸಿಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು ಅಬುಧಾಬಿ ಪೊಲೀಸ್ ಟ್ರಾಫಿಕ್ ಆ್ಯಂಡ್ ಪಟ್ರೋಲಿಂಗ್ ಡೈರೆಕ್ಟರೇಟ್ ನವ ಮಾಧ್ಯಮಗಳ ಮೂಲಕ ತಿಳಿಸಿದೆ.