ರಿಯಾದ್ : ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ರಿಯಾದ್ ಝೋನ್ ವ್ಯಾಪ್ತಿಗೆ ಬರುವ ಹಯ್ಯುಲ್ ಮುರೂಜ್ ಸೆಕ್ಟರ್ ವತಿಯಿಂದ ಇತ್ತೀಚೆಗೆ ಕಾರ್ಯಕರ್ತರಿಗಾಗಿ ಸಂಭ್ರಮದ ಸ್ನೇಹ ಸಂಗಮ ಕಾರ್ಯಕ್ರಮ ಏರ್ಪಡಿಸಲಾಯಿತು.
ಕಾರ್ಯಕ್ರಮವನ್ನು KCF ರಿಯಾದ್ ಝೋನ್ ಅಧ್ಯಕ್ಷ ಫಾರೂಕ್ ಸಅದಿ ಹೆಚ್ ಕಲ್ಲು ಉದ್ಘಾಟಿಸಿದರು. KCF ಧುರೀಣ ಸಾಮಾಜಿಕ ಮುಂದಾಳು ಅಬ್ದುಲ್ ರಝಾಕ್ ಹಾಜಿ ಉಜಿರೆ ಅಧ್ಯಕ್ಷತೆ ವಹಿಸಿದರು.
ಕಾರ್ಯಕರ್ತರ ಧಾರ್ಮಿಕ ಜ್ಞಾನವನ್ನು ಉತ್ತೇಜಿಸುವ ದೃಷ್ಟಿಯಿಂದ GCC ಯಾದ್ಯಂತ ನಡೆಸಿಕೊಂಡು ಬರಲಾಗುತ್ತಿರುವ “ಅಸ್ಸುಫ್ಫಾ” ತರಗತಿಯನ್ನು ಉದ್ಘಾಟಿಸಿ ಮಾತನಾಡಿದ ಮುಡಿಪು ಎಜು ಪಾರ್ಕ್ ಮುಖ್ಯಸ್ಥ ಅಸ್ಸಯ್ಯಿದ್ ಅಶ್ರಫ್ ತಂಗಳ್ ಆದೂರು ‘ ಸಂಘಟನೆ ನಡೆಸಿಕೊಂಡು ಬರುತ್ತಿರುವ ಈ ತರಗತಿಯಿಂದ ಕಾರ್ಯಕರ್ತರಲ್ಲಿ ಧಾರ್ಮಿಕ ಅರಿವಿನ ಆಳವನ್ನು ವೃದ್ಧಿಸಲು ಸಾಧ್ಯವಾಗಿದೆ.
ಬದುಕಿನ ಜಂಜಾಟದ ನಡುವೆ ನಾವು ಕಳೆದುಕೊಂಡ ಪ್ರೀತಿ, ಬಾಂಧವ್ಯ, ಉದಾರತೆ, ಸಾಮರಸ್ಯ ಹಾಗೂ ಪರಸ್ಪರ ಕೊಡುಕೊಳ್ಳುವಿಕೆಯಂತಹ ಜೀವನ ಮೌಲ್ಯಗಳನ್ನು ಮರಳಿ ಪಡೆಯಲು ಜ್ಞಾನ ಗಳಿಕೆಯು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಬದುಕಿನುದ್ದಕ್ಕೂ ನಾವು ಒಂದಲ್ಲ ಒಂದು ರೀತಿಯಲ್ಲಿ ವಿದ್ಯಾರ್ಥಿಗಳಾಗಿಯೇ ಉಳಿದುಕೊಳ್ಳುವುದು ಅನಿವಾರ್ಯವೆನಿಸುತ್ತದೆ ಎಂದು ಹಿತವಚನ ನೀಡಿದರು.
“ಗಲ್ಫ್ ಇಶಾರಾ” ಅಭಿಯಾನವನ್ನು ಅಬ್ದುಲ್ ರಝಾಕ್ ಹಾಜಿ ಉಜಿರೆ ಯವರಿಗೆ ಪತ್ರಿಕೆಯ ಪ್ರತಿ ನೀಡುವ ಮೂಲಕ KCF ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಕನ್ವೀನರ್ ಬಶೀರ್ ತಲಪ್ಪಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ
KCF ಬತ್ತಾ ಸೆಕ್ಟರ್ ಅಧ್ಯಕ್ಷ ಅಬ್ದುರ್ರಝಾಕ್ ಮುಸ್ಲಿಯಾರ್ ನಾಟೆಕಲ್ಲು , ಅಶ್ರಫ್ ಮದನಿ ಪಾಂಡವರಕಲ್ಲು , KCF ಮುರೂಜ್ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಜೀಲಾನಿ ಕನ್ನಂಗಾರು, ಸ್ವಾಗತ ಸಮಿತಿಯ ಚೆಯರ್ಮೇನ್ ಮುಹಮ್ಮದ್ ರಫೀಕ್ ಸರಳಿಕಟ್ಟೆ, ಕನ್ವೀನರ್ ಅಬ್ದುಲ್ ಸಲಾಮ್ ಪಾಂಡವರಕಲ್ಲು, KCF ಬದಿಯಃ ಸೆಕ್ಟರ್ ಕಾರ್ಯದರ್ಶಿ ಅಮೀರ್ ಹಾಜಿ ಕಲ್ಲಾಪು,ಝೋನ್ ಮುಖಂಡ ಇಬ್ರಾಹಿಂ ಮುರ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.KCF ಮುರೂಜ್ ಸೆಕ್ಟರ್ ಅಧ್ಯಕ್ಷ PK ದಾವೂದ್ ಸ’ಅದಿ ಉರುವಾಲು ಪದವು ಪ್ರಾಸ್ತಾವಿಕ ಭಾಷಣ ಮಾಡಿದರು. KCF ಮುರೂಜ್ ಸೆಕ್ಟರ್ ಸದಸ್ಯರಾದ ಅಬ್ದುಲ್ ಲತೀಫ್ ಮಿಸ್ಬಾಹಿ ಬೆಳಂದೂರು ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.






