ಸೋಶಿಯಲ್ ಮೀಡಿಯಾ ಹೀಗೆ ಓಪನ್ ಮಾಡಿ ನೋಡಿದಾಗ ಎಲ್ಲಾ ಗ್ರೂಪ್ ಎಲ್ಲಾ ಸ್ಟೇಟಸ್ಗಳು ಹಾಗೂ ಎಫ್.ಬಿ ಪೇಜ್ ಗಳು ತೌಸೀಫ್ ಹಿಮಮಿ ಅವರ ಫೋಟೋದಿಂದ ತುಂಬಿಹೋಗಿತ್ತು.
ಹೀಗೆ ಓಪನ್ ಮಾಡಿ ನೋಡಿದಾಗ ಒಂದು ನಿಮಿಷ ತಲ್ಲಣಗೊಂಡೆ. ಇನ್ನಾಲಿಲ್ಲಾಹ್ ಒಂದು ಉತ್ತಮ ನಡೆ-ನುಡಿಯ ಒಳ್ಳೆಯ ಸ್ನೇಹಿತನ ಕಳೆದುಕೊಂಡೆ ಎಂದು ಆಗಷ್ಟೇ ತಿಳಿಯಿತು. ಅತಿಯಾದ ದುಃಖ ಆವರಿಸಿತು.
ತೌಸೀಫ್ ಉಸ್ತಾದರ ಕುರಿತು ಬರೆಯದಿದ್ದರೆ ನಾನು ಬರೆಯುವ ಯಾವುದೇ ಬರಹಕ್ಕೂ ಚಿಕ್ಕ-ಚೊಕ್ಕ ಭಾಷಣಗಳಿಗೆ ಅರ್ಥವೇ ಇರದು ನನಗೆ ಅವರ ಪರಿಚಯ ಟ್ರೈನರ್ಸ್ ಕ್ಲಾಸ್ ಗಳಲ್ಲಾಗಿತ್ತು.
ಜೀವನದಲ್ಲಿ ಮುನ್ನಡೆಸಲು ಆಗದಷ್ಟು ಸಮಸ್ಯೆಗಳನ್ನು ಹೊತ್ತು ಬರುವ ಹಲವಾರು ಮಂದಿಗಳಿಗೆ ತನ್ನ ಉತ್ತಮ ವಾಕ್ಚಾತುರ್ಯ ದ ಮೂಲಕ ಅವರಿಗೆ ಯಶಸ್ವಿ ಜೀವನದ ಹಾದಿಯನ್ನು ತೋರುತ್ತಿದ್ದರು. ಉತ್ತಮ ಸೌಮ್ಯ ಸ್ವಭಾವದ ಪ್ರೀತಿಯ ನಿಷ್ಕಲಂಕ ಮನಸ್ಸಿನ ಉಸ್ತಾದ್ ಇಂದು ಚಿರನಿದ್ರೆಗೆ ಜಾರಿದ್ದಾರೆ ಇಡೀ ಸುನ್ನಿ ಲೋಕವೇ ಕಣ್ಣೀರು ಹಾಕುತ್ತಿದೆ. ಯಾವುದೇ ಪ್ರಚಾರ ಶಬ್ದಗಳಿಲ್ಲದೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಾವು ಕಾಣುತ್ತಿರಬಹುದು ಉಸ್ತಾದರ ನೈಜ ಜೀವನದ ಅನಾವರಣ.
ಆ ಮಾತುಗಳು ಒಂದು ಸ್ಪುಟವಾದ ಸೌಮ್ಯವಾದ ಮಾತು. ಮಾತಿನಲ್ಲಿ ಒಂದು ಗದರಿಕೆ ಇಲ್ಲ, ಗಲಿಬಿಲಿ ಇಲ್ಲ,ಎಲ್ಲವೂ ಸೌಮ್ಯ ಇಂದು ಅವರು ಕೂಡ ಹಲವಾರು ಕುರ್-ಆನ್, ತಹ್ಲೀಲ್ ಉನ್ನತ ವಿದ್ವಾಂಸರು ದುಆಗಳನ್ನು ಸ್ವೀಕರಿಸುತ್ತಾ ಪರಲೋಕ ಯಾತ್ರೆಗೈದರು.
ಭಾಗ್ಯವಂತ ಭಾಗ್ಯವಂತ ತೌಸೀಫ್ ಹಿಮಮಿ
ಉಸ್ತಾದರ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಅದೆಷ್ಟೋ ಉಲಮಗಳು ಉಸ್ತಾದಿನ ಮಗ್ಫಿರತ್ ಗಾಗಿ ಕೈ ಎತ್ತಿ ದುವಾ ಮಾಡುತ್ತಿದ್ದಾರೆ,
ಶೈಖುನಾ A,P ಉಸ್ತಾದರು ಸಾವಿರಾರು ಮತಅಲ್ಲಿಂಗಳನ್ನು ಮುಂದಿರಿಸಿ ಹಿಮಮಿ ಉಸ್ತಾದರ ಮಗ್ಫೀರತ್ ಗಾಗಿ ದುವಾ ಮಾಡುತ್ತಿರುವಾಗ ಬಾಗ್ಯವಲ್ಲದೇ ಮತ್ತಿನ್ನೇನು!..
ತೌಸೀಫ್ ಉಸ್ತಾದರ ಹುಟ್ಟುಹಬ್ಬದ ದಿನದಂದು ಅವರು ನೀಡಿದ ಸಂದೇಶ ಇಂದು ಕಣ್ಣು ತುಂಬುತ್ತಿದೆ,
ಸುಬುಹಾನಲ್ಲಾಹ್…!
“ಜನನ ದಿನ ನೆನಪಿಸದಿದ್ದರೂ ಮರಣ ದಿನ ನೆನಸಿ ಸಾಕು ದನ್ಯನಾಗುವೆ’ ಏನೊಂದು ಅರ್ಥ ಪೂರ್ಣವಾದ ಮಾತು, ಆ ಮಾತು ಇಂದು ನಿಜವಾಗಿದೆ ಪ್ರತಿಯೊಬ್ಬನೂ ಉಸ್ತಾದಿಗಾಗಿ ಕೈಗಳನ್ನು ಅಲ್ಲಾಹನ ಬಳಿ ಎತ್ತಿದ್ದಾರೆ,
ಕೆ,ಎಂ ಸಿದ್ದೀಕ್ ಮೊಂಟುಗೊಳಿ ಉಸ್ತಾದ್ ಚಿಕ್ಕ ಮಕ್ಕಳಂತೆ ಬಿಕ್ಕಿ-ಬಿಕ್ಕಿ ಅಳುವಾಗ ಹಿಮಮಿ ಉಸ್ತಾದ್ ಗಳಿಸಿರುವ ಪ್ರೀತಿ ಅದೆಷ್ಟಾಗಿರಬಹುದು.
ಸುಫ್ಯಾನ್ ಸಖಾಫಿ ಉಸ್ತಾದರ ಸಂದೇಶ ನೋಡುವಾಗ ಕಣ್ಣೀರು ಬರದೇ ಹೋಗದು, ಉಸ್ತಾದರ ಸಂದೇಶ ಅಷ್ಟೊಂದು ಅರ್ಥಪೂರ್ಣವಾಗಿತ್ತು.
“ತೌಸೀಫ್ ಹಿಮಮಿ ನನ್ನನ್ನು ನೋಯಿಸಿದರು ಎಂದು ಹೇಳಲು ಭೂಲೋಕದಲ್ಲಿ ಯಾರು ಇರಲಿಕ್ಕಿಲ್ಲ!
ಖಂಡಿತಾ ಸಾಧ್ಯವೇ ಇಲ್ಲ, ಅಷ್ಟೊಂದು ಮುಗ್ದ ಸ್ವಭಾವದವರಾಗಿದ್ದರು ಅವರು.
ಒಂದಂತೂ ಸತ್ಯ ಉಸ್ತಾದರ ವಿಯೋಗವೂ ಎಲ್ಲಾ ಸುನ್ನೀ ಮುಸಲ್ಮಾನರ ಕಣ್ಣಿನಂಚಿನಲ್ಲಿ ಕಣ್ಣೀರು ಹರಿಸಿದೆ.
ಅಲ್ಲಾಹು ಮಗ್ಫಿರತ್ ನೀಡಲಿ, ಅವರ ಕುಟುಂಬಕ್ಕೂ ಸ್ನೇಹಿತರ ಬಳಗಕ್ಕೂ ಅಲ್ಲಾಹು ಕ್ಷಮೆ ನೀಡಿ ಅನುಗ್ರಹಿಸಲಿ(ಆಮಿನ್).
ಉಸ್ತಾದರ ವಿಯೋಗ ಸಮುದಾಯಕ್ಕೆ ತುಂಬಲಾರದ ನಷ್ಟವೇ ಸರಿ,
ಅಲ್ಲಾಹ್…ಪ್ರತಿಭೆ ನೀಡಿದವ ನೀನು,
ವಿದ್ವತ್ತು ನೀಡಿದವ ನೀನು,
ವಿನಯ ಕೊಟ್ಟವ ನೀನು, ಪಾಂಡಿತ್ಯದ ತೋಟದಿಂದ ಸುಳಿವೇ ಇರದಂತೆ ಹೂವೊಂದ ನೀ ಕೀಳುವಾಗ ಹೇಗೆ ಸಹನೆ ಪಾಲಿಸಲಿ ನಾನು!….
✍ ಕೆ,ಪಿ ಬಾತಿಶ್ ತೆಕ್ಕಾರು