janadhvani

Kannada Online News Paper

ಮಾಣಿ: ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್ ಅಧೀನದ ಮಹಿಳಾ ಕಾಲೇಜು ‘ಕಬಕ ಕೆಜಿಎನ್ ಶೀ ಕ್ಯಾಂಪಸ್’ ನ ವಾರ್ಷಿಕೋತ್ಸವ ‘ಗ್ಲೀಮ್-2k19’ ನ ಸಮಾರೋಪವು ನ.22 ರಂದು ನಡೆಯಲಿದೆ‌.
ಮಹಿಳೆಯರಿಗಾಗಿ ಮಾತ್ರ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಮೌಲಿದ್, ಹಾಗೂ ಮದ್ಹ್ ಮಜ್ಲಿಸ್ ಗಳಿಗೆ ಕೆಜಿಎನ್ ಮಹಿಳಾ ಷರೀಅತ್ ವಿಭಾಗದ ಮುಖ್ಯಸ್ಥೆ ಸಫೀದಾ ಅಲ್ ಮಾಹಿರಾ, ಉಪನ್ಯಾಸಕಿ ಶಫೀಖಾ ಅಲ್ ಮಾಹಿರಾ, ಕುಂದಾಪುರ ಕೋಡಿ ಆಇಶಾ ಸಿದ್ದೀಖಾ ಮಹಿಳಾ ಕಾಲೇಜಿನ ಉಪನ್ಯಾಸಕಿ ಝೈನಬಾ ಮೊದಲಾದವರು ನೇತೃತ್ವ ವಹಿಸುವರು.ಮಹಿಳಾ‌ ಪಿಯುಸಿ ಹಾಗೂ ಶರೀಅತ್ ವಿಭಾಗಗಳಿಗೆ ನಡೆದ ವಿವಿಧ ಸ್ಫರ್ಧೆಗಳ‌ ಫಲಿತಾಂಶ ಪ್ರಕಟ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ವಹೀದಾ ನೆಕ್ಕಿಲಾಡಿ ಅಧ್ಯಕ್ಷತೆ ವಹಿಸುವರು. ಶಹನಾಝ್ ಫುರ್ಖಾನಿ ದಿಕ್ಸೂಚಿ ಭಾಷಣ ಮಾಡುವರು, ನಫೀಸಾ ಮಾಣಿಯವರಿಗೆ ಇದೇ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ನಡೆಯಲಿದೆ. ರೈಹಾನ ಉಪ್ಪಿ‌ನಂಗಡಿ, ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಝಹೀರಾ ಸೂರಿಕುಮೇರು, ಇತಿಹಾಸ ವಿಭಾಗದ ಸುಮನ್ ಶೇಖ್ ಮೊದಲಾದವರು ಭಾಗವಹಿಸುವರು ಎಂದು ಕೆಜಿಎನ್ ಶೀ ಕ್ಯಾಂಪಸ್ ಪ್ರಾಂಶುಪಾಲೆ ದಿಲ್ಶಾನಾ ಬಾನು ಪ್ರಕಟನೆಯಲ್ಲಿ ತಿಳಿಸಿದ್ದಾರೆ.