janadhvani

Kannada Online News Paper

ಸುನ್ನೀ ಯುವಜನ ಸಂಘ (SYS)ಉಜಿರೆ ಬ್ರಾಂಚ್ ನೂತನ ಸಮಿತಿ ಅಸ್ತಿತ್ವಕ್ಕೆ

SYS ಉಜಿರೆ ಬ್ರಾಂಚ್ ಮಹಾಸಭೆಯು ದಿನಾಂಕ 19/10/2019 ನೇ ಶನಿವಾರ ಮಗ್ರಿಬ್ ನಮಾಝಿನ ಬಳಿಕ ಬದ್ರುಲ್ ಹುದಾ ಮದರಸ ಹಳೆಪೇಟೆ ಉಜಿರೆಯಲ್ಲಿ ಅಧ್ಯಕ್ಷರಾದ ಉಮರ್ ಕುಂಞಿ ನಾಡ್ಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯಿದ್ ಇಸ್ಮಾಯಿಲ್ ತಂಙಳ್ ರವರು ದುಆ ನೆರವೇರಿಸಿದರು.ಉಜಿರೆ ಖತೀಬರಾದ B.A ಅಬ್ಬಾಸ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

SYS ಉಜಿರೆ ಬ್ರಾಂಚ್‌ನ ನೂತನ ಅಧ್ಯಕ್ಷರಾಗಿ ಹೈದರ್ ಮದನಿ,ಕಾಶಿಬೆಟ್ಟು ಪ್ರ.ಕಾರ್ಯದರ್ಶಿಯಾಗಿ ಹಾರಿಸ್ AtoZ ಕೋಶಾಧಿಕಾರಿಯಾಗಿ B.M ಹುಸನಬ್ಬ ಉಪಾಧ್ಯಕ್ಷರಾಗಿ ಹುಸೈನ್ ನ್ಯಾಷನಲ್ ಜೊ.ಕಾರ್ಯದರ್ಶಿಗಳಾಗಿ ಅಶ್ರಫ್ KCF,ಅಶ್ರಫ್ M.H ಹಾಗೂ 16 ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಉಜಿರೆ ಸೆಂಟರ್ ನಾಯಕರಾದ ಇಬ್ರಾಹಿಮ್ ಕಕ್ಕಿಂಜೆ, ಎಸ್.ಎಂ ಕೋಯ ತಂಙಳ್, ಹಾಗೂ SYS ಹಾಗೂ SSF ಕಾರ್ಯಕರ್ತರು ಉಪಸ್ಥಿತರಿದ್ದರು.
ಉಮರ್ ಕುಂಞಿ ನಾಡ್ಜೆ ಸ್ವಾಗತಿಸಿದರು, ಕೊನೆಯಲ್ಲಿ ಅಶ್ರಫ್ KCF ವಂದಿಸಿದರು.

✍ಎಂ.ಎಂ.ಉಜಿರೆ