ತಬೂಕ್: ಅಕ್ಟೋಬರ್ 18 :ಕೆ.ಸಿ.ಎಫ್ ಮದೀನಾ ಝೋನ್ ವ್ಯಾಪ್ತಿಯ ತಬೂಕ್ ಸೆಕ್ಟರ್ ಅ\nಧೀನದ ಮೂರೂಜ್ ಯುನಿಟ್ ನ “Zeal-19” ಕ್ಯಾಂಪ್ ಅತ್ಯಂತ ವಿಜಯಕರವಾಗಿ 18 ಅಕ್ಟೋಬರ್ 2019 ಶುಕ್ರವಾರ ರಾತ್ರಿ2 30 ರಿಂದ ಶುಕ್ರವಾರ ಬೆಳಗಿನ ಜಾವ 5 ಗಂಟೆ ತನಕ ಬಹಳ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ಮದೀನಾ ಝೋನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕರಾಯ ದುಆ ಮೂಲಕ ಆತ್ಮೀಯ ಚಾಲನೆ ಕೊಟ್ಟರು.
ಸಭೆಯನ್ನು ಸೆಕ್ಟರ್ ಸಂಘಟನೆ ಕಾರ್ಯದರ್ಶಿ ಹುಸೈನ್ ಮುಕ್ವೆ ಉದ್ಘಾಟನೆ ಮಾಡಿದರು. ಯುನಿಟ್ ಉಸ್ತುವಾರಿ ಯಾಕೂಬ್ ಬನಾರಿ ಬೆಳಂದೂರು ಅಧ್ಯಕ್ಷತೆ ವಹಿಸಿದರು.
ಕಾರ್ಯಾಗಾರದ ಭಾಗವಾಗಿ ಎರಡು ತರಗತಿಗಳು ನಡೆಸಿದ್ದು ಮೊದಲ ತರಗತಿಯನ್ನು “ಕಾರ್ಯಕರ್ತನ ದಿನಚರಿ” ಎಂಬ ವಿಷಯದಲ್ಲಿ ಝೋನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮುಸ್ಲಿಯರ್ ಕರಾಯ ಸವಿಸ್ತಾರವಾಗಿ ವಿಷಯ ಮಂಡಿಸಿದರು. ನಂತರ “ಸಂಘಟನೆ ಯಾಕೆ”ಎಂಬ ವಿಷಯದಲ್ಲಿ ಸುನ್ನೀ ಸಂಘಟನೆಗಳ ಅನಿವಾರ್ಯತೆ ಬಗ್ಗೆ ರಮಳಾನ್ ಮದನಿ ಉಸ್ತಾದ್ ಕುಪ್ಪಟ್ಟಿ ತರಗತಿ ಮಂಡಿಸಿದರು.
ಬಳಿಕ ಯುನಿಟ್ ಸದಸ್ಯರಿಂದ ಪರಿಚಯ ಭಾಷಣ ಮಾಡಲಾಯ್ತು. ಮುಖ್ಯ ಅತಿಥಿಗಳಾಗಿ ಸೆಕ್ಟರ್ ಅದ್ಯಕ್ಷರಾದ ಅಬ್ದುಲ್ ರೆಹಮಾನ್(ಆಬ್ಬೊನಾಕ)ಭದ್ರಾವತಿ ಉಪಸ್ಥಿತರಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಾಸಿರ್ ಕಕ್ಕಿಂಜೆ ಸ್ವಾಗತಿಸಿ ಕೊನೆಯಲ್ಲಿ ಸೆಕ್ಟರ್ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಇಕ್ಬಾಲ್ ಸರಲಿಕಟ್ಟೆ ಅಭಿನಂದನಾ ಭಾಷಣ ಮತ್ತು ಧನ್ಯವಾದ ಸಮರ್ಪಿಸಿದರು. ಮೂರು ಸ್ವಲಾತ್ ನೊಂದಿಗೆ ಕಾರ್ಯಾಗಾರ ಸಭೆಯನ್ನು ಮುಕ್ತಾಯ ಗೊಳಿಸಲಾಯ್ತು.
ಮೂರೂಜ್ ಯುನಿಟ್ ಕಾರ್ಯದರ್ಶಿ ಶರಫುದ್ದಿನ್ ಕುಂಜತೂರು ಕಾರ್ಯಕ್ರಮ ನಿರೂಪಿಸಿದರು. ವೆಲ್ಕಂ ಜ್ಯೂಸ್, ಚಾಕ್ಲೇಟ್, ಖರ್ಜೂರ ಮತ್ತು ಕೊನೆಯಲ್ಲಿ ಸ್ವಾದಿಷ್ಟವಾದ ಆಹಾರ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ಕೊಟ್ಟಿತು.
✍🏻 ಕೆ ಸಿ ಎಫ್ ಮೂರೂಜ್ ಯುನಿಟ್
ತಬೂಕ್ ಸೆಕ್ಟರ್
– 💤eal 19.