ಮದೀನಾ ಮುನವ್ವರ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಮದೀನಾ ಮುನವ್ವರ ಝೋನ್ ಹಾಗೂ ಸೆಕ್ಟರ್ ಅಧೀನದಲ್ಲಿರುವ ಅಝೀಝಿಯ ಯುನಿಟ್ ನಲ್ಲಿ ZEAL-19 ಕಾರ್ಯಕ್ರಮವು ದಿನಾಂಕ 18.10.2019 ಶುಕ್ರವಾರ ಜುಮಾ ನಮಾಝಿನ ಬಳಿಕ ಅಝೀಝಿಯದಲ್ಲಿರುವ ಅಝರ್ ಕ್ರಷ್ಣಾಪುರ ಇವರ ನಿವಾಸದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ನಾಯಕರಾದ ಉಮರ್ ಮುಸ್ಲಿಯಾರ್ ಕೊಡಗು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಅಹ್ಲುಸ್ಸುನ್ನದ ವಕ್ತಾರರೆಂದು ಹೇಳುವ ನಾವು ನಬಿ ಸ್ವಲ್ಲಲ್ಲಾಹುಅಲೈಹಿವಸಲ್ಲಮರು ಕಲಿಸಿಕೊಟ್ಟ ಸುನ್ನತ್ತನ್ನು ಪಾಲಿಸಲು ಅಶ್ರಧ್ದೆವಹಿಸುತ್ತಿದ್ದು, ಸುನ್ನತ್ತಾದ ಗಡ್ಡ, ಟೋಪಿ, ಮೊಣಕಾಲಿನ ಮೇಲೆ ವಸ್ತ್ರ ಹೀಗೆ ಇತರ ಸುನ್ನತ್ತನ್ನು ಪಾಲಿಸುವ ಮಾದರಿ ಕಾರ್ಯಕರ್ತರಾಗಲು ಇಂತಹ ಕಾರ್ಯಕ್ರಮವು ಅವಕಾಶವನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕೆಂದು ಕರೆನೀಡಿದರು.

ZEAL-19 ಕಾರ್ಯಕ್ರಮದ ಪ್ರಯುಕ್ತ ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯು ರೂಪಿಸಿದ “ಕಾರ್ಯಕರ್ತನ ದಿನಚರಿ” ಎಂಬ ವಿಷಯದಲ್ಲಿ ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ಅದ್ಯಕ್ಷರಾದ ಅಶ್ರಫ್ ಸಖಾಫಿ ನೂಜಿ ಹಾಗೂ “ಸಂಘಟನಾ ಕಾರ್ಯಚಟುವಟಿಕೆ” ಎಂಬ ವಿಷಯದಲ್ಲಿ ಸೆಕ್ಟರ್ ಶಿಕ್ಷಣ ವಿಭಾಗ ಅದ್ಯಕ್ಷರಾದ ಅಬೂಬಕರ್ ಮುಸ್ಲಿಯಾರ್ ಉದ್ದಬೆಟ್ಟು ಇವರು ತರಗತಿಯನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಕೆ.ಸಿಎಫ್ ಮದೀನಾ ಮುನವ್ವರ ಸೆಕ್ಟರ್ ಸಂಘಟನಾ ಇಲಾಖೆಯ ಅದ್ಯಕ್ಷರಾದ ಇಕ್ಬಾಲ್ ಕುಪ್ಪೆಪದವು ಅವರು ಮಾತನಾಡಿ ZEAL-19 ಕಾರ್ಯಕ್ರಮವು ಸಂದರ್ಭೋಚಿತ ಕಾರ್ಯಕ್ರಮವಾಗಿದ್ದು , ಕಾರ್ಯಕರ್ತರ ಹುಮ್ಮಸ್ಸಿಗೆ ಪ್ರೇರಣೆ ನೀಡಲು ಒಗ್ಗಟ್ಟಾಗಿ ಕಾರ್ಯಾಚರಿಸಬೇಕೆಂದು ಸಲಹೆ ನೀಡಿದರು.
ಪ್ರಾರಂಭದಲ್ಲಿ ಕೆ.ಸಿ.ಎಫ್ ಕಾರ್ಯಕರ್ತ ಅಝರ್ ಕ್ರಷ್ಣಾಪುರ ಇವರ ತಂದೆಯ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಹಾಗೂ ದುವಾ ಮಜ್ಲಿಸ್ ನಡೆಯಿತು.
ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ಕಾರ್ಯದರ್ಶಿ ಅಶ್ರಫ್ ಹಾಜಿ ಕಿನ್ಯ, ಕೆ.ಸಿ.ಎಫ್ ಮದೀನಾ ಮುನವ್ವರ ಸೆಕ್ಟರ್ ಸಮಿತಿಯ ಸದಸ್ಯರಾದ ಅಬ್ದುಲ್ ರಝಾಕ್ ಹಾಜಿ ಅಳಕೆ ಮಜಲು, ಅಝೀಝಿಯ ಯುನಿಟ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಕನ್ಯಾನ ಸಹಿತ ಹಲವಾರು ಕಾರ್ಯಕರ್ತರು ಭಾಗವಹಿದ್ದರು.
ಕೆ.ಸಿ.ಎಫ್ ಮದೀನಾ ಮುನವ್ವರ ಝೋನಲ್ ನ ಪ್ರಧಾನ ಕಾರ್ಯದರ್ಶಿ ಹುಸೈನಾರ್ ಹಾಜಿ ಮಾಪಲ್ ಸ್ವಾಗತಿಸಿ, ನಿರೂಪಿಸಿದರು.
ವರದಿ:
ಆಸಿಫ್ ಬದ್ಯಾರ್






