ಮರ್ಧಾಳ ಜಮಾತಿಗೆ ಒಳಪಟ್ಟ ಪ್ರವಾಸಿ ಸಮೂಹದ ಅಂತರ್ರಾಷ್ಟ್ರೀಯ ಸಂಘಟನೆಯಾದ ನುಸ್ರತುಲ್ ಇಸ್ಲಾಂ ಇಂಟರ್ನ್ಯಾಷನಲ್ ಯೂಥ್ ಫೆಡರೇಷನ್ ಇದರ ಮೂರನೇ ವಾರ್ಷಿಕ ಮಹಾಸಭೆಯು ದಿನಾಂಕ 11/10/2019 ಶುಕ್ರವಾರ ಜುಮಾ ನಮಾಝಿನ ಬಳಿಕ ಅಂತರ್ಜಾಲದಲ್ಲಿ ಜನಾಬ್ ನಿಸಾರ್ ಖಾನ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಬಹುಮಾನ್ಯ ಹಬೀಬ್ ಮುಸ್ಲಿಯಾರ್ ರವರು ದು:ವಾ ಆಶೀರ್ವಚನ ನೆರವೇರಿಸಿದರು.
ನಂತರ 2019-20ನೇ ಸಾಲಿನ ಮೂರನೇ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು.
ಪ್ರಧಾನ ಸಲಹೆಗಾರರಾಗಿ ಬಹು ಕೆ ಎಸ್ ಶಾಹುಲ್ ಹಮೀದ್ ತಂಗಳ್, ಹನೀಫ್ ಸಖಾಫಿ ಮರ್ಧಾಳ ಗೌರವಾಧ್ಯಕ್ಷರಾಗಿ ಮುಹಮ್ಮದ್ ಸಿ ಕೆ ಹಾಗೂ ಸಲಹಾ ಸಮಿತಿ ಸದಸ್ಯರುಗಳಾಗಿ ಅಬ್ದುರ್ರಹ್ಮಾನ್ ಮುಸ್ಲಿಯಾರ್, ಅಬ್ದುಲ್ ಖಾದರ್ ಕೆನರಾ, ತಲ್ಹತ್ ಮಿತ್ತೋಡಿ, ಹನೀಫ್ ಖಾನ್, ದಾವೂದ್ ಖಾನ್ ಪೆರ್ಲ, ಸಿರಾಜ್ ಕೊಡಿಕಂಡ, ಇವರುಗಳನ್ನು ಆರಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಹೈದರ್ ಕೊಹಿನೂರ್, ಉಪಾಧ್ಯಕ್ಷರುಗಳಾಗಿ ರಜಾಕ್ ಮಿತೋಡಿ, ಆಸಿಫ್ ಎಫ್.ಎಚ್, ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್ ಪಾಲತ್ತಡ್ಕ, ಜೊತೆ ಕಾರ್ಯದರ್ಶಿಯಾಗಿ ಸರ್ಫುದ್ದೀನ್ ಮರ್ದಾಳ, ಇಲ್ಯಾಸ್ ಮಿತ್ತೋಡಿ, ಖಜಾಂಜಿಯಾಗಿ ಹನೀಸ್ ಕೊಹಿನೂರು, ಲೆಕ್ಕಪರಿಶೋಧಕರಾಗಿ ನಿಸಾರ್ ಖಾನ್, ಶಿಕ್ಷಣ ವಿಭಾಗದ ಚೇರ್ಮೇನ್ ಆಗಿ ಹಬೀಬ್ ಮುಸ್ಲಿಯಾರ್ ಕನ್ವಿನರಾಗಿ ಹನೀಫ್ ಸಾಲತ್ತಡ್ಕ, ಸಂಘಟನಾ ವಿಭಾಗದ ಚೇರ್ಮೇನ್ ಆಗಿ ಹೈದರ್ ಜಝೀರ ಕನ್ವೀನರಾಗಿ ಅಶ್ರಫ್ ಬೀಡಿ, ಸಾಂತ್ವನ ವಿಭಾಗದ ಚೇರ್ಮೇನ್ ಆಗಿ ಅಬ್ದುಲ್ ಸಲಾಂ ಮರ್ಧಾಳ ಕನ್ವೀನರಾಗಿ ಅಶ್ರಫ್ ಮಿತ್ತೋಡಿ, ಪ್ರಕಟನಾ ವಿಭಾಗದ ಚೇರ್ಮೇನ್ ಆಗಿ ಅಶ್ರಫ್ ಕೊಡಂಕಿರಿ ಕನ್ವೀನರಾಗಿ ಅಬ್ದುಲ್ ರಹ್ಮಾನ್ ಇವರುಗಳನ್ನು ಆಯ್ಕೆ ಮಾಡಲಾಯಿತು.






