janadhvani

Kannada Online News Paper

ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಸೆಕ್ಟರ್ ವತಿಯಿಂದ ಮಾದಕ ದ್ರವ್ಯ ವಿರುದ್ದ ಜನಜಾಗೃತಿ

ಉಪ್ಪಿನಂಗಡಿ: ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಉಪ್ಪಿನಂಗಡಿ ಸೆಕ್ಟರ್ ಇದರ ವತಿಯಿಂದ ಗಾಂಧೀ ಜಯಂತಿಯ ಪ್ರಕಾರ ಮಾದಕ ದ್ರವ್ಯ ವಿರುದ್ದ ಜನಜಾಗೃತಿ ಅಭಿಮಾಯನವೂ ಇಲ್ಲಿನ ಕರುವೇಲು ಜಂಕ್ಷನ್ ನಲ್ಲಿ ನಡೆಯಿತು.

ಸೆಕ್ಟರ್ ಅಧ್ಯಕ್ಷ ಹಾರಿಸ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಂ.ಎಚ್ ಸಖಾಫಿ ನಚ್ಚಬೆಟ್ಟು ದುವಾ ಆಶಿರ್ವಚನ ನಡೆಸಿದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಡಿವಿಶನ್ ನಾಯಕರಾದ ಎಂ.ಎಂ ಮಹ್ ರೂಫ್ ಆತೂರು ಮುಖ್ಯಭಾಷಣವನ್ನು ಮಾಡಿ ಮದ್ಯದಿಂದ ಉಂಟಾಗುತ್ತಿರುವ ದುಷ್ಪರಿಣಾಮ ಹಾಗೂ ಮಾದಕ ದ್ರವ್ಯಗಳಿಗೆ ಮಾನವನು ಬಲಿಯಾಗುತ್ತಿರುವುದನ್ನು ವಿವರಿಸುತ್ತಾ ಗಾಂಧಿಯ ಅತ್ಯಂತ ದೊಡ್ದ “ಮದ್ಯಮುಕ್ತ ಭಾರತದ ಕನಸು” ನನಸಾಗಿಸಲು ನಾವೆಲ್ಲರೂ ಸದಾ ಪಣತೊಡಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ಫ್ ಉಪ್ಪಿನಂಗಡಿ ಸೆಕ್ಟರ್ ನಾಯಕರದ ಹಮೀದ್ ಕರುವೇಲು,ಹಾರಿಸ್ ಗಂಡಿಬಾಗಿಲು ಅಲ್ಲದೆ ಎಸ್ಸೆಸ್ಸೆಫ್ಫಿನ ಕ್ಯೂ ಟೀಂ ಸದಸ್ಯರೂ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಮದ್ಯದ ದುಷ್ಪರಿಣಾಮಗಳನ್ನು ವಿವರಿಸಲಾದ ಕರಪತ್ರವನ್ನು ಉಪ್ಪಿನಂಗಡಿ ಜಂಕ್ಷನ್ ವರೆಗೆ ವಿತ್ಙರಿಸಲಾಯಿತು.ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಆತೂರು ಸ್ವಾಗತಿಸಿ,ಪ್ರ.ಕಾರ್ಯದರ್ಶಿ ಉನೈಸ್ ಅಹ್ಮದ್ ವಂದಿಸಿದರು.

error: Content is protected !! Not allowed copy content from janadhvani.com