ಚಿಕ್ಕಮಗಳೂರು: SSF ಕುದುರೆಗುಂಡಿ ಯೂನಿಟ್ ಸಮಿತಿಯು ಶಾರದಾ ಧನ್ವಂತರಿ ಆಸ್ಪತ್ರೆ ಶೃಂಗೇರಿ ಇವರ ಸಹಕಾರದೊಂದಿಗೆ 150ನೇ ಗಾಂಧಿ ಜಯಂತಿಯ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುದುರೆಗುಂಡಿ ಯಲ್ಲಿ ಹಮ್ಮಿಕೊಂಡಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF ಕುದುರೆಗುಂಡಿ ಯೂನಿಟ್ ಅಧ್ಯಕ್ಷರಾದ ಸರ್ಫುದ್ದೀನ್ ರವರು ವಹಿಸಿದ್ದರು.ಕುದುರೆಗುಂಡಿ ಬದ್ರೀಯ್ಯಾ ಜುಮ್ಮಾ ಮಸ್ಜಿದ್ ಖತೀಬರಾದ ನೌಫಲ್ ಹಿಮಾಮಿರವರು ಉದ್ಘಾಟನಾ ಭಾಷಣವನ್ನು ನಡೆಸಿದರು. SSF ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷರಾದ ಝೈನುಲ್ ಆಬಿದ್ ಸಖಾಫಿರವರು ಪಾಸ್ತಾವಿಕ ಭಾಷಣ ನಡೆಸಿದರು.
ಶಾರದಾ ಧನ್ವಂತರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಲಕ್ಷ್ಮೀನಾರಾಯಣ್ ರವರು ರಕ್ತದಾನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ SSF ಚಿಕ್ಕಮಗಳೂರು ಜಿಲ್ಲಾ ನಾಯಕರು, ಶಾರದಾ ಧನ್ವಂತರಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಕುದುರೆಗುಂಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ SDMC ಅಧ್ಯಕ್ಷರು ಮಂಜುನಾಥ್ ಶೆಟ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಜ್ಯೋತಿ ರಾವ್ ಮತ್ತು ಹಿರಿಯ ಶಿಕ್ಷಕರು ಓಂಕರಪ್ಪ, ಕುದುರೆಗುಂಡಿ ಕಪಿಲ ರೈಸ್ ಮಿಲ್ ಮಾಲೀಕರಾದ ದೀಪಕ್ ಗೌಡ್ರು, ಕುದುರೆಗುಂಡಿ ಬದ್ರೀಯ್ಯಾ ಜುಮ್ಮಾ ಮಸ್ಜಿದ್ ಅಧ್ಯಕ್ಷರು ಮೂಸಬ್ಬ, SSF ಕೊಪ್ಪ ಡಿವಿಷನ್ ಅಧ್ಯಕ್ಷರು ಸ್ವಾದಿಕ್, ಕೊಪ್ಪ ಜೆ.ಸಿ.ಐ ಅಧ್ಯಕ್ಷರು ಹೇಮಂತ್ ಶೆಟ್ಟಿ, ಕುದುರೆಗುಂಡಿ ಸರ್ಕಾರಿ ಪೌಢಶಾಲೆ ಮುಖ್ಯೋಪಾಧ್ಯಾಯರು ಶಮಂತ, ಊರಿನ ಸುತ್ತ-ಮುತ್ತಲಿನ ಸಂಘ ಸಂಸ್ಥೆಗಳ ನಾಯಕರು, ರಕ್ತದಾನಿಗಳು ಉಪಸ್ಥಿತರಿದ್ದರು.
SSF ಕೊಪ್ಪ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ರವರು ಕಾರ್ಯಕ್ರಮವದ ಸ್ವಾಗತವನ್ನು ನಡೆಸಿ ಕೊನೆಯಲ್ಲಿ ಧನ್ಯವಾದವಿತ್ತರು.
ಈ ಕಾರ್ಯಕ್ರಮದಲ್ಲಿ 41 ಯೂನಿಟ್ ರಕ್ತ ಸಂಗ್ರಹವಾಗಿದೆ.