janadhvani

Kannada Online News Paper

SSF ಬೆಳ್ತಂಗಡಿ ಡಿವಿಷನ್ ವತಿಯಿಂದ “CAMPUS GLIMPSE-2k19” ಕಾರ್ಯಕ್ರಮ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ.) SSF ಬೆಳ್ತಂಗಡಿ ಡಿವಿಷನ್ ವತಿಯಿಂದ ವಿದ್ಯಾರ್ಥಿಗಳಿಗಾಗಿ “CAMPUS GLIMPSE-2k19” ಕಾರ್ಯಕ್ರಮವು ದಿನಾಂಕ‌ 02/10/2019ನೇ ಬುದವಾರ ಬೆಳಿಗ್ಗೆ 10.00ಗಂಟೆಗೆ ಅಂಬೇಡ್ಕರ್ ಭವನ ಬೆಳ್ತಂಗಡಿಯಲ್ಲಿ ನಡೆಯಿತು.
SSF ಬೆಳ್ತಂಗಡಿ ಡಿವಿಷನ್ ಉಪಾಧ್ಯಕ್ಷರಾದ ಕೆರೀಂ ಸಖಾಫಿ ಅಧ್ಯಕ್ಷತೆಯನ್ನು ವಹಿಸಿದ್ದರು. SSF ದ.ಕ ಜಿಲ್ಲಾ ಸದಸ್ಯರಾದ ಇಕ್ಬಾಲ್ ಮಾಚಾರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

SSFದ.ಕ ಈಸ್ಟ್ ಝೋನ್ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರ್ ಹಾಗೂ ಡಿವಿಷನ್ ವಿಸ್ಡಂ ಕನ್ವೀನರ್ ನವಾಝ್ ಮಾವಿನಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.SSF ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಶರೀಫ್ ಬೆರ್ಕಳ ವಿದ್ಯಾರ್ಥಿಗಳಿಗೆ ತರಗತಿ ಮಂಡಿಸಿದರು.

ಈ ಕಾರ್ಯಕ್ರಮದಲ್ಲಿ SSF ದ.ಕ ಈಸ್ಟ್ ಝೋನ್ ಸದಸ್ಯ ಸಿದ್ದೀಕ್ ಪರಪ್ಪು,SSF ಬೆಳ್ತಂಗಡಿ ಡಿವಿಷನ್ ಪ್ರ.ಕಾರ್ಯದರ್ಶಿ ಶರೀಫ್ ನಾವೂರು, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿಗಳು, ಹಾಗೂ ತಾಲೂಕಿನ ವಿವಿದ ಕಾಲೇಜಿನ ಆಯ್ದ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
SSF ಬೆಳ್ತಂಗಡಿ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಝುಬೈರ್ ಶಾಂತಿನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, SSF ಬೆಳ್ತಂಗಡಿ ಡಿವಿಷನ್ ಸದಸ್ಯ ಎಂ.ಮುಬೀನ್, ಉಜಿರೆ ಧನ್ಯವಾದವಿತ್ತರು.
✍ಎಂ.ಎಂ.ಉಜಿರೆ