ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ವತಿಯಿಂದ ಉಲಾಝ್ ತರಬೇತಿ ಶಿಬಿರ ಸೆಪ್ಟಂಬರ್ 29ರಂದು ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಅಧ್ಯಕ್ಷ ಸ್ವಬಾಹ್ ಹಿಮಮಿ ಬೀಜಕೊಚ್ಚಿ ಅಧ್ಯಕ್ಷತೆಯಲ್ಲಿ ಮೊಗರ್ಪಣೆ ಮದರಸಾ ಹಾಲ್ ನಲ್ಲಿ ಜರಗಿತು.

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಮಾಜಿ ಅಧ್ಯಕ್ಷರಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಕುಂಬ್ರ ಸೆಕ್ಟರ್ ಕ್ಯೂ ಟೀಂ ಟ್ಯೂಟರ್ ಕರೀಂ ಸಖಾಫಿ ಕಟ್ಟತ್ತಾರು ಸಂಪನ್ಮೂಲ ವ್ಯಕ್ತಿಗಳಾಗಿ ವಿಷಯ ಮಂಡಿಸಿದರು. ಹಝ್ರತ್ ವಲಿಯುಲ್ಲಾಹಿ ಮಾಂಬಿಳಿ ತಂಙಳ್ ರವರ ಝಿಯಾರತ್ ಗೆ ನೂರುಲ್ ಇಸ್ಲಾಂ ಮದರಸಾ, ಮೊಗರ್ಪಣೆ ಸದರ್ ಮುಅಲ್ಲಿಂ ಮುಹಮ್ಮದ್ ಸಖಾಫಿ ಕೊಟ್ಟಮುಡಿ ನೇತೃತ್ವ ನೀಡಿದರು. ಮದರಸಾ ಮುಅಲ್ಲಿಂ ರಶೀದ್ ಝೈನಿ, ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಸಮಿತಿ ಮಾಜಿ ಅಧ್ಯಕ್ಷರಾದ ಸಿದ್ದೀಕ್ ಕಟ್ಟೆಕಾರ್, ಸೆಕ್ಟರ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಗೂನಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಮಟ್ಟದ ಪ್ರತಿಭೋತ್ಸವ ಡಿಸಂಬರ್ 8ರಂದು ಕುಂಭಕ್ಕೋಡಿನಲ್ಲಿ ಜರಗಲಿದ್ದು, ಅದರ ಲಾಂಚಿಗ್ ಸೆಕ್ಟರ್ ಸಮಿತಿಯ ಪ್ರಥಮ ಮತ್ತು ದ್ವಿತೀಯ ಅವಧಿಗಳ ಅಧ್ಯಕ್ಷರುಗಳಾದ ಸಿದ್ದೀಕ್ ಕಟ್ಟೆಕಾರ್ ರವರು ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ರವರಿಗೆ ಪೋಸ್ಟರ್ ನೀಡಿ ಬಿಡುಗಡೆಗೊಳಿಸಿದರು.
ಶಫೀಕ್ ಕೊಯಂಗಿ ಸ್ವಾಗತಿಸಿ, ಶಾಕಿರ್ ಮೊಗರ್ಪಣೆ ವಂದಿಸಿದರು.






