ಜಿದ್ದಾ: ಸೌದಿ ಅರೇಬಿಯಾದ ಒಂದು ವರ್ಷ ಕಾಲಾವಧಿಯ ಮಲ್ಟಿಪಲ್ ರೀ ಎಂಟ್ರಿ ವೀಸಾಗಳ ಸಹಿತ ಎಲ್ಲ ರೀತಿಯ ವೀಸಾಗಳಿಗೆ 300 ರಿಯಾಲ್(ಸುಮಾರು 5700 ರೂ.) ಶುಲ್ಕ ನಿಗದಿಗೊಳಿಸಲಾಗಿದೆ.
ಹಜ್, ಉಮ್ರಾ,ಪ್ರವಾಸೋಧ್ಯಮ, ವ್ಯವಹಾರ,ಸಂದರ್ಶನ , ಟ್ರಾನ್ಸಿಸ್ಟ್, ಮಲ್ಟಿಪಲ್ ಎಂಟ್ರಿ ವೀಸಾಗಳು ಈ ಏಕೀಕೃತ ಶುಲ್ಕದ ವ್ಯಾಪ್ತಿಗೆ ಬರಲಿವೆ. ಕಳೆದ ದಿವಸ ವೀಸಾ ಶುಲ್ಕ ಏಕೀಕರಿಸಲು ನಿರ್ಧರಿಸಲಾಯಿತು.
ವೀಸಾದ ಸ್ಥಿತಿಯಂತೆ ಸೌದಿಯಲ್ಲಿ ತಂಗುವ ದಿವಸಗಳಲ್ಲಿ ಬದಲಾವಣೆ ಇರಲಿದೆ. ಸಿಂಗಲ್ ಎಂಟ್ರಿ ವೀಸಾದ ಸಮಯ ಒಂದು ತಿಂಗಳು, ಒಂದು ವರ್ಷ ಸಮಯದ ಮಲ್ಟಿಪಲ್ ಎಂಟ್ರಿ ವೀಸಾದಲ್ಲಿ ಒಂದು ಬಾರಿಗೆ ಮೂರು ತಿಂಗಳವರೆಗೆ ಉಳಿಯಬಹುದು. ಟ್ರಾನ್ಸಿಸ್ಟ್ ವೀಸಾದಲ್ಲಿ 96 ಗಂಟೆ ಸಮಯ ಸೌದಿಯಲ್ಲಿ ಸಂಚರಿಸಬಹುದಾಗಿದೆ.
ಈ ಏಕೀಕೃತ ವೀಸಾ ಶುಲ್ಕ ಜಾರಿಯಿಂದಾಗಿ ಉಮ್ರಾ ವೀಸಾಗೆ ಇದ್ದ ಹೆಚ್ಚುವರಿ 2000 ರಿಯಾಲ್ ಶುಲ್ಕವನ್ನು ತೆರವುಗೊಳಿಸಲಾಗಿದೆ.