janadhvani

Kannada Online News Paper

ಇಂಧನವಿಲ್ಲದೆ ಬಿಕಾರಿಯಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ – ಪರದಾಡಿದ ಪ್ರಯಾಣಿಕರು

ಮಂಗಳೂರು.ಸೆ,13: ಇಂದು ಬೆಳಗ್ಗೆ ಮಂಗಳೂರಿನಿಂದ ದುಬೈಗೆ ಪ್ರಯಾಣಿಸಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಕಳಪೆ ಸೇವೆಯ ಮೂಲಕ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಈಗಾಗಲೇ 300 ಕೋಟಿ ಇಂಧನದ ಸಾಲದಲ್ಲಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕಳೆದ ವಾರವೂ ಕೂಡ ದಮ್ಮಾಂನಿಂದಲೂ ಪ್ರಯಾಣಿಕರನ್ನು 4-5 ಗಂಟೆ ಕಾಯುವಂತೆ ಮಾಡಿದೆ.ಇದೊಂದು ನಿತ್ಯದ ರೂಢಿಯಾಗಿ ಬಿಟ್ಟಿದೆ.

ಇಂದು 13/09/2019 ರಂದು ವಿಶೇಷ ಬುದ್ದಿಯನ್ನು ಪ್ರದರ್ಶಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಎಮಿಗ್ರೇಶನ್ ವರೆಗೂ ಯಾವುದೇ ಸೂಚನೆಯನ್ನು ನೀಡದೆ ಪ್ರಯಾಣಿಕರ ಎಮಿಗ್ರೇಶನ್ ಮುಗಿದ ನಂತರ ವಿಮಾನವನ್ನು ತಿರುವನಂದಪುರಂ ಏರ್ಪೋರ್ಟ್ ಗೆ ತಲುಪಿಸಿ ಅಲ್ಲಿ ಎರಡು ಮೂರು ಗಂಟೆಗಳ ಕಾಲ ಪ್ರಯಾಣಿಕರನ್ನು ಕಾಯುವಂತೆ ಮಾಡಿ ಇಂಧನದ ಅಭಾವದಿಂದ ತಿರುವನಂತಪುರಂನಿಂದ ದುಬೈಗೆ ಬರುವ ವಿಮಾನದ ಮೂಲಕ ಪ್ರಯಾಣಿಕರನ್ನು ದುಬೈ ಏರ್ಪೋರ್ಟ್ ಗೆ ತಲುಪಿಸಿತು. 11.30 ಗೆ ತಲುಪಬೇಕಾಗಿದ್ದ ಪ್ರಯಾಣಿಕರು 3 ಗಂಟೆಗೆ ದುಬೈಗೆ ತುಲುಪಿದ್ದಾರೆ.

ಇದರಿಂದ ಅದೆಷ್ಟು ಪ್ರಯಾಣಿಕರು ತೊಂದರೆ ಅನುಭವಿಸಿದರು ಎಂಬುವುದು ಏರ್ ಇಂಡಿಯಾ ಸಿಬ್ಬಂದಿಗಳಿಗೆ ಗೊತ್ತಿದೆಯೇ? ವಿದೇಶ ಪ್ರಯಾಣಿಸುವವರಲ್ಲಿ ಅಧಿಕ ಮಂದಿ ಬ್ಯುಸಿನೆಸ್ ಸಂಬಂಧಿಸಿದ್ದಾಗಿರಬಹುದು, ಕಾರ್ಯಕ್ರಮಗಳಿಗೆ ತಲುಪಬೇಕಾಗಿರಬಹುದು, ಸಭೆ ಸಮಾರಂಭಗಳಿಗೆ ಪಾಲ್ಗೊಳ್ಳುವವರಿರಬಹುದು, ಗರ್ಭಿಣಿಗಳಿರಬಹುದು, ಚಿಕ್ಕ ಮಕ್ಕಳು ಇರಬಹುದು, ತುರ್ತು ಅಧಿಕಾರಿಗಳಿರಬಹುದು, ಸರ್ಜರಿ ವೈದ್ಯರುಗಳಿರಬಹುದು, ರೋಗಿಗಳಿರಬಹುದು, ಉದ್ಯೋಗ ಪರೀಕ್ಷೆಗೆ ಹಾಜರಿರುವರು ಇರಬಹುದು, ಸ್ಪೋರ್ಟ್ಸ್ ಗೇಮ್ಗೆಸ್ ಗೆ ತಲುಪಬೇಕಾದವರು ಇರಬಹುದು, ವೀಸಾವಧಿ ಮುಗಿಯುವವರಿರಬಹುದು ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರನ್ನು ಕ್ಲಪ್ತ ಸಮಯಕ್ಕೆ ತಲುಪಿಸಬೇಕಾದ ಜವಾಬ್ದಾರಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ಗಿಲ್ಲವೇ? ಇಂತಹಾ ಬೇಜವಾಬ್ದಾರಿತನದಿಂದ ಅದೆಷ್ಟು ಪ್ರಯಾಣಿಕರು ಇಂದು ಪರದಾಡುವಂತಾಯಿತು?.

ಈ ವಿಮಾನವನ್ನು ನಂಬಿಕೊಂಡು ಟಿಕೇಟ್ ಖರೀದಿಸಿದವರನ್ನು ಈ ರೀತಿಯಾಗಿ ಮಾನಸಿಕ ತೊದರೆಯನ್ನು ನೀಡಿ ಪೀಡಿಸಿದರೆ ಏರ್ ಇಂಡಿಯಾ ಸಹ ಜೆಟ್ ಏರ್ವೇಸ್ ಹಾದಿಯನ್ನು ಸ್ವೀಕರಿಸುವುದರಲ್ಲಿ ಸಂಶಯವಿಲ್ಲ.

ಏರ್ ಇಂಡಿಯಾ ಅಧಿಕಾರಿಗಳೊಂದಿಗೆ ವಿನಯಪೂರ್ವಕ ಹೇಳುವುದೇನೆಂದರೆ ದಯವಿಟ್ಟು ಪ್ರಯಾಣಿಕರಿಗೆ ತೊಂದರೆ ಕೊಡಬೇಡಿ. ಒಬ್ಬ ವಿದೇಶಕ್ಕೆ ಪ್ರಯಾಣಿಸುವ ಪ್ರಯಾಣಿಕನು ಮಾನಸಿಕವಾಗಿ ಮೊದಲೇ ನೊಂದಿರುತ್ತಾರೆ. *ಹಲವಾರು ಒತ್ತಡಗಳನ್ನು ಸಹಿಸಿಕೊಂಡು ಭಾರವಾದ ಹೃದಯದೊಂದಿಗೆ ಏರ್ಪೋರ್ಟುಗೆ ಬರುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಉತ್ತಮ ಸೇವೆಯನ್ನು ನೀಡಿ ದಯವಿಟ್ಟು ಹಿಂಸೆ ನೀಡಬೇಡಿ. ಸಮಯಕ್ಕೆ ತಲುಪಲು ಸಾಧ್ಯವಾಗದಿದ್ದರೆ ಒಂದು ದಿನ ಮೊದಲೇ ತಿಳಿಸಿಬಿಡಿ. ಅವರು ಬೇರೆ ದಾರಿ ಹುಡುಕುತ್ತಾರೆ. ಅದು ಬಿಟ್ಟು ಎಮಿಗ್ರೇಶನ್ ಮುಗಿದ ನಂತರ ತಿಳಿಸಿದರೆ ಏನು ಮಾಡಲು ಸಾಧ್ಯ? ವೀಸಾವಧಿ ಮುಗಿದವರ ಅವಸ್ಥೆಯನ್ನು ಒಮ್ಮೆ ಆಲೋಚಿಸಿ ನೋಡಿ!!!

✍🏻Nizzu4ever ಉರುವಾಲು ಪದವು

error: Content is protected !! Not allowed copy content from janadhvani.com