ದುಬೈ: ದಾರುಲ್ ಅಶ್ ಅರಿಯ ದುಬೈ ಸಮಿತಿ ವತಿಯಿಂದ ಸೆಪ್ಟೆಂಬರ್ 13 ಶುಕ್ರವಾರ ರಾತ್ರಿ 7 ಗಂಟೆಗೆ ದೇರಾ ಕ್ರೀಕ್ ಪರ್ಲ್ ಹೋಟೆಲ್ ನಲ್ಲಿ ಅಶ್ ಅರಿಯ ಶರೀಅತ್ ಕಾಲೇಜ್ 3ನೇ ಸನದು ದಾನ ಸಮ್ಮೇಳನದ ಘೋಷಣಾ ಸಮಾವೇಶವು ಬಹು ಖುರ್ರತುಸ್ಸಾದತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ರವರ ನೇತ್ರತ್ವದಲ್ಲಿ ನಡೆಯಲಿದೆ.
ದಾರುಲ್ ಅಶ್ ಅರಿಯ ಮ್ಯಾನೇಜರ್ ಬಹು ಮುಹಮ್ಮದ್ ಅಲಿ ಸಖಾಫಿ ಅವರಿಂದ ಮುಖ್ಯ ಪ್ರಭಾಷಣೆ ಹಾಗೂ ಅಸಿಫ್ ಮತ್ತು ತಂಡದಿಂದ ಬುರ್ದಾ ಆಲಾಪನೆ , ಬದರ್ ಮೌಲೂದ್ ಮಜಲಿಸ್ ಹಾಗೂ ಕೂರ ತಂಙಳ್ ರವರಿಂದ ವಿಶೇಷ ಪ್ರಾರ್ಥನೆ ಕೂಡಾ ನಡೆಯಲಿರುವುದೆಂದು ದುಬೈ ಸಮಿತಿ ಹಾಗೂ ಸ್ವಾಗತ ಸಮಿತಿಯಿಂದ ನಡೆದ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಸ್ವಾಗತ ಸಮಿತಿ ಚೇರ್ಮ್ಯಾನ್ ನಝೀರ್ ಹಾಜೀ ಕೆಮ್ಮಾರ, ಜನರಲ್ ಕನ್ವಿನರ್ ಶೆರಿಫ್ ಬೊಲ್ಮಾರ್, ರಾಷ್ಟ್ರೀಯ ಸಮಿತಿ ಜನರಲ್ ಸೆಕ್ರೆಟರಿ ಮೂಸಾ ಹಾಜೀ ಬಸರ ಹಾಗೂ ದುಬೈ ಸಮಿತಿ ಅಧ್ಯಕ್ಷ ಅಬ್ದುಲ್ಲ ಉಸ್ತಾದ್ ರವರು ತಿಳಿಸಿರುತ್ತಾರೆ.