ಕುವೈತ್ ನಗರ: ಕುವೈತ್ನಿಂದ ಕಣ್ಣೂರಿಗೆ ಗೋ ಏರ್ ನೇರ ಸೇವೆ ಆರಂಭಿಸಲಿದೆ. ಕುವೈತ್ನಿಂದ ಕಣ್ಣೂರಿಗೆ ಪ್ರಯಾಣಕ್ಕಾಗಿ ಕಂಪನಿಯು ಅತ್ಯಂತ ಕಡಿಮೆ ಅಂದರೆ 28 ಕುವೈತ್ ದಿನಾರ್ ಅನ್ನು ಘೋಷಿಸಿದೆ.
ಸೆಪ್ಟೆಂಬರ್ 19 ರಿಂದ ಸೇವೆ ಪ್ರಾರಂಭವಾಗಲಿದ್ದು, ಕುವೈತ್ನಿಂದ ಕಣ್ಣೂರಿಗೆ ಒಂದು ದಾರಿ ಟಿಕೆಟ್ 28 ದಿನಾರ್ ಮತ್ತು ಕಣ್ಣೂರಿನಿಂದ ಕುವೈತ್ಗೆ 6300 ರೂ. ನಿಗಧಿಪಡಿಸಲಾಗಿದೆ
ಗೋ ಏರ್ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಉಪಾಧ್ಯಕ್ಷ ಬಕುಲ್ ಗಾಲಾ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ ಪ್ರಕಾರ, ಭಾರತೀಯ ನಗರಗಳಾದ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ಬೆಂಗಳೂರಿಗೆ ವಿಮಾನಯಾನ ಸೇವೆ ಒದಗಿಸಲಿದೆ.
ಜೆ.ಡಬ್ಲ್ಯೂ ಮಾರಿಯೆಟ್ ಹೊಟೇಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗೋ ಏರ್ ಇಂಟರ್ನ್ಯಾಷನಲ್ ಮ್ಯಾನೇಜರ್ ಜಲೀಲ್ ಖಾಲಿದ್, ಇಂಟರ್ ನ್ಯಾಷನಲ್ ಆಪರೇಶನ್ಸ್ ಮ್ಯಾನೇಜರ್ ಅರ್ಜುನ್ ಗುಪ್ತಾ ಮತ್ತು ವತನಿಯಾ ಗ್ರೂಪ್ ಮ್ಯಾನೇಜರ್ ಸಲೀಮ್ ಮುರಾದ್ ಉಪಸ್ಥಿತರಿದ್ದರು.