ಕುವೈತ್ ನಗರ: 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕುಟುಂಬ ವೀಸಾ ನೀಡಲು ನಿರಾಕರಿಸಿದೆ ಎನ್ನುವ ಪ್ರಚಾರವನ್ನು ಕುವೈತ್ ವಸತಿ ಇಲಾಖೆ ನಿಷೇಧಿಸಿದೆ. ಕುಟುಂಬದ ಮುಖ್ಯಸ್ಥರ ಕನಿಷ್ಠ ವೇತನವು 500 ದಿನಾರ್ ಇರಬೇಕು ಎಂಬುದನ್ನು ಮಾತ್ರ ಹೊಸತಾಗಿ ಜಾರಿಗೆ ತರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
18 ವರ್ಷಕ್ಕಿಂತ ಮೇಲೆ ವಯಸ್ಸಿನ ಮಕ್ಕಳಿಗೆ ಇಖಾಮಾ ನವೀಕರಿಸಲಾಗುವುದಿಲ್ಲ ಎಂದು ವ್ಯಾಪಕವಾಗಿ ಪ್ರಸಾರ ಪಡಿಸಲಾಗುತ್ತಿದೆ. ಆದರೆ ಅದು ತಪ್ಪು ಮಾಹಿತಿ ಎಂದು ವಸತಿ ಇಲಾಖೆ ಹೇಳಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಕುವೈತ್ ಅಥವಾ ವಿದೇಶದಲ್ಲಿ ಓದುತ್ತಿದ್ದರೆ, ಅವರು ಪ್ರಮಾಣಪತ್ರವನ್ನು ನೀಡುವ ಮೂಲಕ ತಮ್ಮ ಇಕಾಮಾವನ್ನು ನವೀಕರಿಸಬಹುದು.
ಸಂಗಾತಿ ಮತ್ತು ಮಕ್ಕಳಿಗೆ ಸಂದರ್ಶನ ವಿಸಾ ಲಭಿಸಲು ಪ್ರಾಯೋಜಕರ ಕನಿಷ್ಠ ವೇತನ 250 ದಿನಾರ್ ಆಗಿದೆ. ವಿಶೇಷ ಸಂದರ್ಭಗಳಲ್ಲಿ, 200 ದಿನಾರ್ ಹೊಂದಿರುವವರಿಗೆ ವೀಸಾ ನೀಡುವ ವಿವೇಚನೆಯನ್ನು ಸಂಬಂಧಿಸಿದ ವಿಭಾಗದ ಅಧಿಕಾರಿಗಳು ಹೊಂದಿದ್ದಾರೆ.
ಪೋಷಕರು ಮತ್ತು ಒಡಹುಟ್ಟಿದವರಿಗೆ ಕುಟುಂಬ ವೀಸಾ ಒಂದು ತಿಂಗಳ ಕಾಲಾವಧಿ ಹೊಂದಿರುತ್ತದೆ. ಹೆಂಡತಿ ಮತ್ತು ಮಕ್ಕಳಿಗೆ ಮೂರು ತಿಂಗಳ ವೀಸಾ ಸಿಗುತ್ತದೆ. ಎರಡೂ ವಿಭಾಗಗಳಲ್ಲಿ ವಾಸ್ತವ್ಯವನ್ನು ವಿಸ್ತರಿಸುವ ಬಗ್ಗೆ ಆರೋಗ್ಯ ಮುಂತಾದ ಕಾರಣಗಳನ್ನು ಮುಂದಿಟ್ಟು ನಿರ್ಧರಿಸುವ ಅಧಿಕಾರವನ್ನು ಕಾರ್ಯ ವಿಭಾಗದ ಅಧಿಕಾರಿಗಳಿಗಿದೆ ಎಂದು ಅಧಿಕೃತರು ತಿಳಿಸಿದ್ದಾರೆ.