ರಿಯಾದ್: ಈ ವರ್ಷದ ಉಮ್ರಾ ವೀಸಾ ಸ್ಟ್ಯಾಂಪಿಂಗ್‌ನಲ್ಲಿ ಉಂಟಾದ ಬಿಕ್ಕಟ್ಟು ಮುಂದುವರಿದ್ದು, ಸೌದಿ ಸರಕಾರದ ಶುಲ್ಕ ಏರಿಕೆಯು ಯಾತ್ರಾರ್ಥಿಗಳಿಗೆ ಮುಗ್ಗಂಟಾಗಿ ಪರಿಣಮಿಸಿದೆ. 300 ಕ್ಕೂ ಹೆಚ್ಚು ರಿಯಾಲ್‌ಗಳನ್ನು ವಿಧಿಸುವ ಸೌದಿ ಅರೇಬಿಯಾದ ರಾಜ್ಯ ಸಚಿವಾಲಯದ ಹೊಸ ಆದೇಶವು ಸೆ.09 ರಂದು ಮಧ್ಯಾಹ್ನ ತಮ್ಮ ವೆಬ್‌ಸೈಟ್‌ನಲ್ಲಿ ಯಾವುದೇ ಎಚ್ಚರಿಕೆಯಿಲ್ಲದೆ ಪ್ರಕಟಿಸಲಾಗಿದೆ.
ಹೊಸ ವ್ಯವಸ್ಥೆಯಿಂದಲೇ ಕಳೆದ ವರ್ಷಕ್ಕೆ ಹೋಲಿಸಿದರೆ ತೀರ್ಥಯಾತ್ರೆಗಳ ಶುಲ್ಕ ವೆಚ್ಚ 10,000 ರೂ.ಗಿಂತ ಹೆಚ್ಚಾಗಿದೆ. ಈ ಹೆಚ್ಚಳವು ಅನೇಕ ಉಮ್ರಾ ಗುಂಪುಗಳು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ತೊಂದರೆ ಉಂಟುಮಾಡಿದೆ. ವೀಸಾ ಹೊಂದಿರುವವರು ಹೋಟೆಲ್ ಮತ್ತು ವಿಮಾನಯಾನ ಟಿಕೆಟ್ ಮುಂಗಡವಾಗಿ ಕಾದಿರಿಸಿದ್ದು, ಅವರಿಗೆ ಏನು ಉತ್ತರಿಸುವುದು ಎಂಬ ಬಗ್ಗೆ ಈ ವಲಯದಲ್ಲಿ ಕೆಲಸ ಮಾಡುವವರೆಲ್ಲರೂ ಚಿಂತಿತರಾಗಿದ್ದಾರೆ.
ಕಳೆದ ವರ್ಷ, ಸೌದಿ ಸರ್ಕಾರವು ವೀಸಾ ವಿತರಣೆಗೆ 2,500 ರೂ.ಗಳನ್ನು ವಿಧಿಸಿದಾಗ, ಈ ವರ್ಷ ಮುಹರ್ರಂ ನಿಂದ ಶುಲ್ಕ ಹೆಚ್ಚಳದೊಂದಿಗೆ 8000 ರೂ.ಗೆ ತಲುಪಿದೆ. ಆದರೆ 300 ರಿಯಾಲ್ ಇನ್ನಷ್ಟು ಹೆಚ್ಚಿಸುವ ಮೂಲಕ ಉಮ್ರಾ ವೀಸಾದ ಶುಲ್ಕವು 14,000 ಕ್ಕೆ ಏರಲಿದೆ.
ಆದರೆ ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಹೋಗುವವರಿಗೆ ಈ ಹಿಂದೆ ಇದ್ದ 2,000 ರಿಯಾಲ್ ಶುಲ್ಕವನ್ನು 3 ವರ್ಷದಲ್ಲಿ ಎರಡನೇ ಬಾರಿ ತೆರಳುವವರಿಗೆ 300 ರಿಯಾಲ್ ಆಗಿ ಇಳಿಸಲಾಗಿದೆ.